Subrahmanya:-ಸುಬ್ರಹ್ಮಣ್ಯ ರೋಟರಿಯಿಂದ ಶಾಲೆಗೆ ಕಂಪ್ಯೂಟರ್ ಕೊಡುಗೆ

ಸುಬ್ರಹ್ಮಣ್ಯ 

ರೋಟರಿ ಕ್ಲಬ್ ವತಿಯಿಂದ ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಕಂಪ್ಯೂಟರ್  ಅನ್ನು ಕೊಡುಗೆಯಾಗಿ ಸೋಮವಾರ ನೀಡಲಾಯಿತು.

ಕಂಪ್ಯೂಟರ್ ಸೆಟ್ಟನ್ನು ಹಾಸನದ ಉದ್ಯಮಿ ಶ್ರೀ ಕೃಷ್ಣ ಶೆಟ್ಟಿಗಾರ್ ನೀಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಗೋಪಾಲ್ ಎಣ್ಣೆಮಜಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಶೋಕ್ ಅಂಬಕ್ಕಲ್ಲು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಮೋಹನ ಗೌಡ ಕೋಟಿ ಗೌಡರ ಮನೆ, ಶಾಲಾ ಮುಖ್ಯ ಶಿಕ್ಷಕಿ ಚಂದ್ರಿಕಾ, ಕ್ಲಬ್ಬಿನ ಕೋಶಾಧಿಕಾರಿ ರೋ ಚಂದ್ರಶೇಖರ ನಾಯರ್, ನಿಕಟಪೂರ್ವ ಅಧ್ಯಕ್ಷ ವಿಜಯ ಕುಮಾರ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಹಾಸನದ ಉದ್ಯಮಿ ಕೃಷ್ಣಶೆಟ್ಟಿಗಾರ್ ರನ್ನು ಶಾಲಾ ವತಿಯಿಂದ ಹಾಗೂ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ಕ್ಲಬ್ಬಿನ ಅಧ್ಯಕ್ಷ ಗೋಪಾಲ್ ಎಣ್ಣೆ  ಮಜಲ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವಿಜಯಕುಮಾರ ಸ್ವಾಗತಿಸಿದರು. ರೋ. ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಸಹ ಶಿಕ್ಷಕಿ ಅಂಬಿಕ  ಧನ್ಯವಾದವಿತರು.

ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಡಾ ರವಿಕಕ್ಕೆ ಪದವು ಸದಸ್ಯ ನಾಗರಾಜ ಪರಮಲೆ ಪೂರ್ವ ಅಧ್ಯಕ್ಷ ಲೋಕೇಶ್ ಬಿಎನ್, ರೋ ಸುಬ್ರಹ್ಮಣ್ಯ ಅತ್ಯಾಡಿ, ಶಾಲಾ ಶಿಕ್ಷಕ ವೃಂದ, ಪೋಷಕರು,  ಊರವರು ಮತ್ತು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.