ಮಂಗಳೂರು: ಸಾರ್ವಜನಿಕರ ಗಮನಕ್ಕೆ - ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ
Sunday, March 5, 2023
ಮಂಗಳೂರು: ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಸ್ತೆ ಸಂಚಾರದಲ್ಲಿ ಮಹತ್ತರವಾದ ಬದಲಾವಣೆ ತರಲು ಮಂದಾಗಿದ್ದಾರೆ. ಮೊದಲ ಹಂತದಲ್ಲಿ ಅತೀ ಹೆಚ್ಚು ವಾಹನ ದಟ್ಟಣೆಯುಳ್ಳ ನಗರದ ಪ್ರಮುಖ ಜಂಕ್ಷನ್ ಹಂಪನಕಟ್ಟ ಜಂಕ್ಷನ್ ನಲ್ಲಿ ಪ್ರಾಯೋಗಿಕ ಸಂಚಾರ ಬದಲಾವಣೆಗೆ ಮಾಡಲು ನಿರ್ಧರಿಸಿದ್ದಾರೆ. ಈ ಜಂಕ್ಷನ್ ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹಂಪನಕಟ್ಟ ಜಂಕ್ಷನ್‌ನ ಮಧ್ಯದಲ್ಲಿ ಬ್ಯಾರಿಕೇಡ್ ಅಳವಡಿಸಿ ಈ ಕೆಳಗಿನಂತೆ ಸಂಚಾರ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಲಾಗಿದೆ.
1. ಕ್ಲಾಕ್ ಟವರ್ ಕಡೆಯಿಂದ ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ಎಲ್ಲಾ ವಾಹನಗಳು ಇನ್ನು ಮುಂದೆ ಹಂಪನಕಟ್ಟ ಸರ್ಕಲ್ ನಲ್ಲಿ ನೇರವಾಗಿ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ, ಜೋಸ್ ಅಲುಕಾಸ್ ಎದುರು ಯೂ ಟರ್ನ್ ಪಡೆದು ವಾಪಾಸ್ ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಸಂಚರಿಸಬಹುದಾಗಿದೆ.
2. ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಕ್ಲಾಕ್ ಟವರ್ ಕಡೆಗೆ ಸಂಚಾರ ಮಾಡಿ, ಕ್ಲಾಕ್ ಟವರ್ ಜಂಕ್ಷನ್‌ನಲ್ಲಿ ಟರ್ನ್ ತೆಗೆದು ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
3. ನವಭಾರತ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜೆ ಮಂಗೇಶ್ವರ ರಾವ್ ರಸ್ತೆಯ (ಪಿ.ಎಂ.ರಾವ್) ಮೂಲಕ ಚಲಿಸಿ, ಗಣಪತಿ ಹೈಸ್ಕೂಲ್ ರಸ್ತೆ (ಅಹೆಚ್‌ಎಸ್) ಮೂಲಕ ಕೃಷ್ಣಭವನಕಟ್ಟೆ ಜಂಕ್ಷನ್(ಕೆ.ಬಿ.ಕಟ್ಟೆ) ತಲುಪಿ, ಅಲ್ಲಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ. ಹಾಗೆಯೇ ನವಭಾರತ್ ಸರ್ಕಲ್ ಕಡೆಯಿಂದ ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಜಂಕ್ಷನ್‌ನಲ್ಲಿ ಎಡ ತಿರುವು (ಫ್ರೀ ಲೆಫ್ಟ್) ಪಡೆದು ಮುಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕಾಸ್ ಎದುರು ಯೂ ಟರ್ನ್ ಪಡೆದು ಹಂಪನಕಟ್ಟ ಜಂಕ್ಷನ್ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫರ್ (ಮದರ್ ಥೆರೇಸಾ ರಸ್ತೆ) ಕಡೆಗೆ ಹಾಗೂ ನೇರವಾಗಿ ಕ್ಲಾಕ್‌ಟವ ಕಡೆಗೆ ಸಂಚರಿಸಬಹುದಾಗಿದೆ.
4. ಹಂಪನಕಟ್ಟ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (Zebra Cross)ಅನ್ನು ಗುರುತಿಸಿದ್ದು ಪಾದಚಾರಿಗಳು ಕಡ್ಡಾಯವಾಗಿ ಪಾದಚಾರಿಗಳ ಮಾರ್ಗಗಳನ್ನು ಉಪಯೋಗಿಸುವುದು.
5. *ಸಾರ್ವಜನಿಕರಿಗೆ ವಿಶೇಷ ಸೂಚನೆ*: ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಹಾಗೂ ನಗರ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳಿಗೆ ಕೃಷ್ಣಭವನಕಟ್ಟೆ ಬಸ್ಸು ನಿಲ್ದಾಣದ ಬಳಿಕ ಜೋಸ್ ಅಲುಕಾಸ್ ಎದುರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸುಗಳನ್ನು ಹತ್ತಲು ಅನುವು ಮಾಡಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಈ ಬಸ್ಸು ನಿಲ್ದಾಣಗಳನ್ನು ಹೊರತುಪಡಿಸಿ ಹಂಪನಕಟ್ಟೆಯ ಬಳ ಬಸ್ಸನ್ನು ಹತ್ತಲು ನಿಲ್ಲದೇ ಕೃಷ್ಣಭವನಕಟ್ಟೆ ಜಂಕ್ಷನ್ ಅಥವಾ ಜೋಸ್ ಅಲುಕಾಸ್ ಬಸ್ ನಿಲ್ದಾಣಗಳನ್ನೇ ಉಪಯೋಗಿಸುವುದು.