-->

ಅಧಿಕಾರಿ ಮೇಲೆ ಹಲ್ಲೆ : ಶಾಸಕನಿಗೆ ಎರಡು ವರ್ಷ ಕಾರಾಗೃಹ ವಾಸ

ಅಧಿಕಾರಿ ಮೇಲೆ ಹಲ್ಲೆ : ಶಾಸಕನಿಗೆ ಎರಡು ವರ್ಷ ಕಾರಾಗೃಹ ವಾಸ


ನಾಸಿಕ್: ಅಧಿಕಾರಿಯೋರ್ವರ ಮೇಲೆ ಹಲ್ಲೆಗೈದು, ಉದ್ದೇಶಪೂರ್ವಕ ಅವಮಾನ ಮಾಡಿರುವ  ಆರೋಪದಲ್ಲಿ ಅಚಲ್‌ಪುರ ಶಾಸಕ ಓಂಪ್ರಕಾಶ್ ಅಲಿಯಾಸ್ ಬಚ್ಚು ಬಾಬುರಾವ್ ಕಾಡು ಅವರಿಗೆ ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿ ಸೆಷನ್ಸ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ನಾಸಿಕ್ ಮನಪಾ ಆಯುಕ್ತರ ಕಚೇರಿಯ ಪಕ್ಕದ ಹಾಲ್‌ನಲ್ಲಿ 2017ರ ಜುಲೈ 24ರಂದು ನಡೆದ ಸಭೆಯಲ್ಲಿ ಶಾಸಕರು ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು. ಶಿಕ್ಷೆ ಜಾರಿಗೆ ಬರುವ ಮುನ್ನ ಬಾಬುರಾವ್ ಕಾಡು ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಶಾಸಕರು ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಸೆಷನ್ಸ್ ನ್ಯಾಯಾಧೀಶ ವಿ.ಎಸ್.ಕುಲಕರ್ಣಿ ಅವರು, ತಮ್ಮ ತೀರ್ಪಿನ ಅನುಷ್ಠಾನ ಭಾಗವನ್ನು ಪ್ರಕಟಿಸಿದ್ದರು‌. ದೂರುದಾರರು, ಸಾಕ್ಷಿಗಳು, ಪಂಚರ ಹೇಳಿಕೆಗಳನ್ನು ಪರಿಶೀಲಿಸಿ ಮತ್ತು ಸಾಂದರ್ಭಿಕ ಪುರಾವೆಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಎರಡು ಆರೋಪಗಳಲ್ಲಿ ಶಾಸಕ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ ಎಂದು ನಾಸಿಕ್ ಪೊಲೀಸ್ ಪಿಆರ್ ಒ ಘಟಕ ಹೇಳಿಕೆ ನೀಡಿದೆ.

"ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ" ಎಂದು ಕಾಡು ಪ್ರಕಟಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ದೇಶಾದ್ಯಂತ ತಮ್ಮ ರಕ್ಷಣೆಗಾಗಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 353ನ್ನು ಬಳಸಿಕೊಳ್ಳುತ್ತಿದ್ದಾರೆ. ಸೆಕ್ಷನ್ 353ನ್ನು ತಿದ್ದುಪಡಿ ಮಾಡುವಂತೆ ಶಾಸಕರು ಹಾಗೂ ಸಿಎಂ ಅವರನ್ನು ಭೇಟಿಯಾಗುತ್ತೇವೆ ಎಂದು ಹೇಳಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article