-->

ಈ ರಾಶಿಯ ಪುರುಷರು ಸಂಬಂಧಕ್ಕೆ ನಿಷ್ಠರಾಗಿರುತ್ತಾರೆ..! ವಂಚನೆ ಮಾಡುವ ಯೋಚನೆಯೇ ಇವರಿಗಿರುವುದಿಲ್ಲ..!

ಈ ರಾಶಿಯ ಪುರುಷರು ಸಂಬಂಧಕ್ಕೆ ನಿಷ್ಠರಾಗಿರುತ್ತಾರೆ..! ವಂಚನೆ ಮಾಡುವ ಯೋಚನೆಯೇ ಇವರಿಗಿರುವುದಿಲ್ಲ..!

  

ಸಂಬಂಧದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಬಹಳ ಪ್ರಮುಖವಾದದ್ದು. ನಿಮ್ಮ ಸಂಗಾತಿಯು ಅವರ ಭಾವನೆಗಳ ಬಗ್ಗೆ ನಿಮ್ಮೊಂದಿಗೆ ಪ್ರಾಮಾಣಿಕವಾಗಿರದಿದ್ದರೆ, ನಿಮ್ಮಿಬ್ಬರ ನಡುವೆ ತೊಂದರೆಗಳು ಉದ್ಭವಿಸುತ್ತವೆ. ವಂಚನೆ, ನೋವು ಮತ್ತು ನಿರಾಶೆಯ ಭಾವನೆಗಳು ಇರಬಹುದು, ಅದನ್ನು ಬದಲಾಯಿಸಲು ಕಷ್ಟವಾಗಬಹುದು. ಈಗಿನ ಕಾಲದಲ್ಲಿ ಪ್ರಾಮಾಣಿಕ ಸಂಗಾತಿ ಸಿಗುವುದು ವಿರಳ. ನಿಷ್ಠಾವಂತರು ಯಾರು ಎನ್ನುವುದನ್ನು ಹುಡುಕುವುದು ಸ್ವಲ್ಪ ಕಷ್ಟವಾದರೆ ನೀವು ಜ್ಯೋತಿಷ್ಯದ ಸಹಾಯವನ್ನು ಪಡೆದುಕೊಳ್ಳಬಹುದು. ಅತ್ಯಂತ ನಿಷ್ಠಾವಂತ ಪುರುಷರನ್ನು ಒಳಗೊಂಡಿರುವ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನೋಡಿ

ವೃಷಭ ರಾಶಿ

 

 

ವೃಷಭ ರಾಶಿಯವರು ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆಯನ್ನು ಗೌರವಿಸುತ್ತಾರೆ. ಸಂಬಂಧಗಳಲ್ಲಿ ಅಗೌರವ ಮತ್ತು ಅಪ್ರಾಮಾಣಿಕತೆಯನ್ನು ಅವರು ಯಾವ ಕಾರಣಕ್ಕೂ ಸಹಿಸುವುದಿಲ್ಲ, ವಿಶೇಷವಾಗಿ ಅವರ ಸಂಗಾತಿಯು ತಮ್ಮ ನಂಬಿಕೆಗೆ ದ್ರೋಹ ಮಾಡಲು ಏನಾದರೂ ಪ್ರಯತ್ನಿಸಿದರೆ ಇವರು ಸುಮ್ಮನೆ ಇರುವುದಿಲ್ಲ. ವೃಷಭ ರಾಶಿಯವರು ತಮ್ಮ ಜೀವನದ ಎಲ್ಲಾ ಇತರ ಅಂಶಗಳಿಗಿಂತ ನಿಷ್ಠೆ, ಪ್ರಾಮಾಣಿಕತೆಗೆ ಆದ್ಯತೆ ನೀಡುತ್ತಾರೆ.ಕಟಕ ರಾಶಿ

 

ಕಟಕ ರಾಶಿಯ ಪುರುಷರು ತಮ್ಮ ಆದ್ಯತೆಗಳ ಬಗ್ಗೆ ಬಹಳ ಸ್ಪಷ್ಟವಾಗಿ ಇರುತ್ತಾರೆ. ಅವರು ಯಾರನ್ನಾದರೂ ಪ್ರೀತಿ ಮಾಡಿದರೆ, ಅವರು ಅದನ್ನು ಪೂರ್ಣ ಹೃದಯದಿಂದ ಮಾಡುತ್ತಾರೆ. ಅವರು ಸಂಬಂಧಗಳಲ್ಲಿ ಪ್ರಾಮಾಣಿಕತೆಯನ್ನು ಮತ್ತು ನಿಷ್ಠೆಯನ್ನು ಪೂಜಿಸುವ ಕಾರಣ ವಂಚನೆ ಮಾಡುವ ಸಂಗಾತಿಯೊಂದಿಗೆ ಖಂಡಿತವಾಗಿಯೂ ಮುಂದುವರಿಯಲಾರರು.
ಸಿಂಹ ರಾಶಿ

 

ಸಿಂಹ ರಾಶಿಯ ಪುರುಷರು ನಂಬಿಕೆಗೆ ಅರ್ಹರು. ಇವರು ಸಂಗಾತಿಯೊಂದಿಗೆ ಮುಕ್ತವಾಗಿರುತ್ತಾರೆ ಮತ್ತು ತಮ್ಮ ಬಾಳಸಂಗಾತಿಗೆ ಹೆಚ್ಚು ನಿಷ್ಠರಾಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚು ಅವರು ತಮ್ಮ ಸಂಗಾತಿಗೆ ಗೌರವ  ನೀಡುತ್ತಾರೆ ಮತ್ತು ಅವರ ನಂಬಿಕೆಗೆ ವಂಚನೆ ಮಾಡಲು ಏನನ್ನೂ ಮಾಡುವುದಿಲ್ಲ. ತಮ್ಮ ಸಂಗಾತಿಯು ಅವರಿಗೆ ಅತ್ಯಂತ ನೋವುಂಟು ಮಾಡಿದರೂ ಅವರು ಬಗ್ಗುವುದಿಲ್ಲ.

ಧನು ರಾಶಿ

 

ರಾಶಿಯ ಪುರುಷರು ತಮ್ಮ ಸಂಬಂಧಗಳ ಮೇಲೆ ಹೆಚ್ಚು ಗಮನ ನೀಡುತ್ತಾರೆ. ಅವರು ಸಂಗಾತಿಯನ್ನು ಹೇಗಿದ್ದರೂ ಸ್ವೀಕಾರ ಮಾಡುತ್ತಾರೆ. ಅವರು ತಮ್ಮ ಸಂಗಾತಿಯ ಭಾವನೆಗಳ ಕಡೆಗೆ ಬಹಳ ಪರಿಗಣನೆಯನ್ನು ಹೊಂದಿದ್ದಾರೆ ಮತ್ತು ಅವರ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸಬೇಕೆಂದು ಬಯಸುತ್ತಿರುತ್ತಾರೆ. ಅವರು ಸಂಬಂಧದಲ್ಲಿ ತಮ್ಮ ವ್ಯಕ್ತಿತ್ವದ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ.ಮಕರ ರಾಶಿ

 

ಮಕರ ರಾಶಿಯ ಪುರುಷರು ತುಂಬಾ ನಿಷ್ಠಾವಂತರಾಗಿರುತ್ತಾರೆ ಮತ್ತು ಪ್ರಾಮಾಣಿಕರು ಅಗಿರುತ್ತಾರೆ. ಅವರು ಸಂಬಂಧದಲ್ಲಿ ಸ್ಪಷ್ಟವಾದ ಆದ್ಯತೆಗಳನ್ನು ಹೊಂದಿದ್ದಾರೆ. ಅವರು ತಮ್ಮ ಸಂಗಾತಿಯೊಂದಿಗೆ ಸಾಕಷ್ಟು ನೇರವಾಗಿರುತ್ತಾರೆ ಮತ್ತು ಅವರು ಅದೇ ರೀತಿ ಮಾಡಬೇಕೆಂದು ನಿರೀಕ್ಷೆ ಪಡುತ್ತಾರೆ. ಅವರು ಮತ್ತು ಅವರ ಸಂಗಾತಿ ಸಂಬಂಧದಿಂದ ಏನು ಬಯಸುತ್ತಾರೆ ಎಂಬುದರ ಕಡೆಗೆ ಅವರು ಹೆಚ್ಚು ಗಮನವನ್ನು ಹರಿಸುತ್ತಾರೆ.

 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article