ಮೊಟ್ಟೆಯ ಜೊತೆ ಈ ಪದಾರ್ಥಗಳನ್ನು ಬೆರೆಸಿ ತಿಂದರೆ ಸುಲಭವಾಗಿ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು..!


ಮೊಟ್ಟೆಯೊಂದಿಗೆ ಮೂರು ವಿಶೇಷ ಪದಾರ್ಥಗಳನ್ನು ಬೆರೆಸಿ ತಿನ್ನುವುದರಿಂದ ಇದು ತೂಕ ನಷ್ಟಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

 ಕೊಬ್ಬರಿ ಎಣ್ಣೆ:
ಕೊಬ್ಬರಿ ಎಣ್ಣೆಯ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನಕಾರಿ. ನೀವು ಮೊಟ್ಟೆಯಿಂದ ಆಮ್ಲೆಟ್ ತಯಾರಿಸುವಾಗ ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಇದು ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 ಕರಿಮೆಣಸು:
ನೀವು ರುಚಿಗಾಗಿ ಬೇಯಿಸಿದ ಮೊಟ್ಟೆ, ಇಲ್ಲವೇ ಆಮ್ಲೆಟ್ ಮೇಲೆ ಪೆಪ್ಪರ್ ಪೌಡರ್ ಎಂದರೆ ಕರಿಮೆಣಸಿನ ಪುಡಿಯನ್ನು ಹಾಕಿ ಸವಿದಿರಬಹುದು. ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಲಾಭದಾಯಕ. ವಾಸ್ತವವಾಗಿ, ಕರಿಮೆಣಸಿನಲ್ಲಿ ಪೈಪರಿನ್ ಎಂಬ ಸಂಯುಕ್ತವು ಕಡುಬರುತ್ತದೆ. 

 ದಪ್ಪ ಮೆಣಸಿನಕಾಯಿ:
ಸಾಮಾನ್ಯವಾಗಿ ಕೆಲವರು ಅಲಂಕಾರದ ದೃಷ್ಟಿಯಿಂದ ಎಗ್ ಬುರ್ಜಿ ಜೊತೆಗೆ ದಪ್ಪ ಮೆಣಸಿನ ಕಾಯಿಯನ್ನು ಹಾಕಿರುತ್ತಾರೆ. ಆದರೆ, ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ದಪ್ಪ ಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಇದು ಕೊಬ್ಬನ್ನು ಕರಗಿಸಬಲ್ಲ ಶಕ್ತಿಯನ್ನು ಹೊಂದಿರುತ್ತದೆ.