-->
ನಿರ್ಮಾಣ ಹಂತದ ಕಟ್ಟಡದಿಂದ ಪೈಪ್ ಆಟೋದ ಮೇಲೆ ಬಿದ್ದು ತಾಯಿ-ಮಗಳು ಮೃತ್ಯು

ನಿರ್ಮಾಣ ಹಂತದ ಕಟ್ಟಡದಿಂದ ಪೈಪ್ ಆಟೋದ ಮೇಲೆ ಬಿದ್ದು ತಾಯಿ-ಮಗಳು ಮೃತ್ಯು


ಮುಂಬೈ: ನಿರ್ಮಾಣ ಹಂತದ ಕಟ್ಟಡವೊಂದರದಲ್ಲಿ ಸೀಲಿಂಗ್ ಫ್ಲ್ಯಾಬ್‌ಗೆ ಆಧಾರವಾಗಿ ನೀಡಿದ್ದ ಪೈಪ್ ಆಟೊರಿಕ್ಷಾವೊಂದರ ಮೇಲೆ ಬಿದ್ದು, ಅದರಲ್ಲಿ ಪ್ರಮಾಣಿಸುತ್ತಿದ್ದ ಮಹಿಳೆ ಹಾಗೂ ಅವರ 9 ವರ್ಷದ ಪುತ್ರಿ ದಾರುಣವಾಗಿ ಮೃತಪಟ್ಟ ಘಟನೆ ಪೂರ್ವ ಜೋಗೇಶ್ವರಿಯಲ್ಲಿ ಶನಿವಾರ ನಡೆದಿದೆ.

ಮಾ ಬಾನೊ ಆಸೀಫ್ ಶೇಖ್ (28) ಮತ್ತು ಆಯತ್ (9) ಮೃತಪಟ್ಟ ದುರ್ದೈವಿಗಳು. ಶಮಾ ಬಾನೊ ತಮ್ಮ ಪುತ್ರಿ ಆಯತ್ ರನ್ನು ಶಾಲೆಯಿಂದ ಕರೆದುಕೊಂಡು ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪಶ್ಚಿಮ ಎಕ್ಸ್‌ಪ್ರೆಸ್ ಹೈವೇ ಶಲ್ಯಕ್ ಆಸ್ಪತ್ರೆ ಬಳಿ ಕೊಳಗೇರಿ ಪುನರ್ವಸತಿ ಪ್ರಾಧಿಕಾರಕ್ಕೆ ಸೇರಿದ ಕಟ್ಟಡದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಸ್ಥಳದಿಂದ ದೊಡ್ಡದಾದ ಪೈಪ್ ಒಂದು, 4ನೇ ಅಥವಾ 5ನೇ ಮಹಡಿಯಿಂದ ಆಟೊರಿಕ್ಷಾ ಮೇಲೆಯೇ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ರಸ್ತೆ ಬದಿ ನಿಂತಿದ್ದವರು ತಕ್ಷಣ ಇಬ್ಬರನ್ನೂ ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಈ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದರೆ, ಬಾಲಕಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಆದರೆ ತಲೆಗಾಗಿರುವ ತೀವ್ರ ಗಾಯದಿಂದ ಬಾಲಕಿಯು ಆಂತರಿಕ ಸ್ರಾವ ಹಾಗೂ ಹಲವು ಕಡೆ ಮುರಿತದ ಗಾಯಗಳಿಂದಾಗಿ ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕಿಯೂ ಕೊನೆಯಸಿರೆಳೆದ್ದಾಳೆ.

ಸಂಬಂಧಪಟ್ಟವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗುತ್ತದೆ. ಯಾವ ಮಹಡಿಯಿಂದ ಪೈಪ್ ಬಿದ್ದಿದೆ ಹಾಗೂ ಯಾರು ಇದಕ್ಕೆ ಹೊಣೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article