ನವ ವಿವಾಹಿತೆ ಫ್ರೆಂಡ್ ಫ್ಲ್ಯಾಟ್ ನಲ್ಲಿ ನಿಗೂಢವಾಗಿ ಸಾವು
Thursday, March 2, 2023
ಕೊಯಿಕ್ಕೋಡ್: ಯುವ ವೈದ್ಯೆಯೊಬ್ಬರು ತಮ್ಮ ಸ್ನೇಹಿತೆಯ ಫ್ಲ್ಯಾಟ್‌ನಲ್ಲಿ ಮಾ. 1ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಿಗೂಢವಾಗಿ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ
ಕೊಯಿಕ್ಕೋಡ್‌ನ ಮಲಬಾರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ಥಾನ್ಸಿಯಾ (25) ಮೃತಪಟ್ಟ ದುರ್ದೈವಿ. ಇವರು ವಯನಾಡಿನ ಕಣಿಯಂಪಟ್ಟದ ನಿವಾಸಿ. ಆದರೆ ಇವರು ಕೊಯಿಕ್ಕೋಡ್‌ನ ಪಲಹಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಮಾ.1ರಂದು ಥಾನ್ಸಿಯಾ ತಮ್ಮ ಸ್ನೇಹಿತೆಯ ಫ್ಲಾಟ್‌ಗೆ ಆಗಮಿಸಿದ್ದರು. ಆದರೆ ಬೆಳಗ್ಗೆ ಅವರು ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅವರು ಬಂದು ಕೊಠಡಿ ತೆರೆದು ನೋಡಿದಾಗ ಥಾನ್ಸಿಯಾ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಆಕೆಯ ಸ್ನೇಹಿತೆ ಕೂಡ ವೈದ್ಯೆಯಾಗಿದ್ದಾರೆ. ಮೃತ ಥಾನ್ಸಿಯಾಗೆ ಇತ್ತೀಚೆಗಷ್ಟೇ ಫರೀತ್ ಎಂಬ ಯುವಕನೊಂದಿಗೆ ಮದುವೆಯಾಗಿತ್ತು.
ಮೃತದೇಹವನ್ನು ಪೊಲೀಸರು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಿದ್ದಾರೆ. ಹೆಚ್ಚಿನ ಪರೀಕ್ಷೆಯ ನಂತರ ಸಾವಿನ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಸ್ಮಾರಕ್ಕೆ ತನ್ಸಿಯಾ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.