ನರೇಂದ್ರ ಮೋದಿ ನೇತೃತ್ವದ BJP ಸರಕಾರಕ್ಕೆ ಬೆಂಬಲ ; ಸುಮಲತಾ ಅಂಬರೀಶ್ ಘೋಷಣೆ




ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ BJP ಸರಕಾರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಬೆಂಬಲ ಘೋಷಣೆ ಮಾಡಿದ್ದಾರೆ. 

ಇಂದು ಮಂಡ್ಯದ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '' ನರೇಂದ್ರ ಮೋದಿ ನಾಯಕತ್ವ ನಂಬಿದ್ದೇನೆ. ಅವರಿಂದಾಗಿ ದೇಶ, ವಿದೇಶದಲ್ಲಿ ತಲೆ ಎತ್ತಿ ನಾನು ಭಾರತೀಯ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಬಂದಿದೆ ಎಂದರು. ಹಿತೈಷಿಗಳನ್ನು ಕೇಳಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ. ಅಂಬರೀಶ್ ಅವರು ಇದ್ದರೂ ಇದನ್ನು ಬೆಂಬಲಿಸುತ್ತಿದ್ದರು'' ಎಂದು ಹೇಳಿದರು.

''ಹಲವು ಪಕ್ಷಗಳು ಅಧಿಕಾರಕ್ಕೆ ಬಂದಿದ್ದರೂ ಮಂಡ್ಯದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಮಂಡ್ಯ ಜಿಲ್ಲೆ ಅಭಿವೃದ್ದಿ ಆಗಬೇಕು ಎಂದರೆ ನಾನು ಒಂದು ಹೆಜ್ಜೆ ಮುಂದೆ ಇಡಬೇಕು. ಇಷ್ಟು ಯೋಜನೆಗಳನ್ನು ತರಲು ಸುಲಭವಾಗಲು ಕೇಂದ್ರ ಸರ್ಕಾರದ ಅವಕಾಶ ಮಾಡಿಕೊಟ್ಟಿದೆ'' ಎಂದು ಹೇಳಿದರು.