-->
1000938341
ಜಗಳವಾಡುತ್ತಿದ್ದ ವೀಡಿಯೋ ಚಿತ್ರೀಕರಿಸಿದ ಶಂಕೆ: ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿ ಆಟೊಡ್ರೈವರ್ ಕೈಮುರಿದ ಮಹಿಳೆ

ಜಗಳವಾಡುತ್ತಿದ್ದ ವೀಡಿಯೋ ಚಿತ್ರೀಕರಿಸಿದ ಶಂಕೆ: ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿ ಆಟೊಡ್ರೈವರ್ ಕೈಮುರಿದ ಮಹಿಳೆ


ಕೊಲ್ಲಂ: ನಡುರಸ್ತೆಯಲ್ಲಿ ನಿಂತು ಮಹಿಳೆಯರು ಜಗಳವಾಡುತ್ತಿರುವುದನ್ನು ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾನೆಂದು ಖ್ಯಾತೆ ತೆಗೆದ ಮಹಿಳೆಯೊಬ್ಬಳು ಕಬ್ಬಿಣದ ಕಲಾಕೆಯಿಂದ ಬಡಿದು ಆಟೋ ಚಾಲಕನ ಕೈ ಮುರಿದಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಕೊಲ್ಲಂನ ಕಡಕ್ಕಲ್ ನಿವಾಸಿ ವಿಜಿತ್ ಕೈ ಮುರಿತಕ್ಕೊಳಗಾದ ವ್ಯಕ್ತಿ. ಈ ಘಟನೆ ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾಂಗಲುಕಾಡು ಮೂಲದ ಅನ್ಸಿಯಾ ಎಂಬಾಕೆ ಕಬ್ಬಿಣದ ಸಲಾಕೆಯಿಂದ ವಿಜಿತ್ ಮೇಲೆ ಹಲ್ಲೆ ನಡೆಸಿದ್ದಳು. ಪರಿಣಾಮ ಅವರು ಕೈಮುರಿತಕ್ಕೊಳಗಾಗಿದ್ದಾರೆ. ಇದೀಗ ಆಕೆಯ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಂಗಲುಕಾಡು ಎಂಬಲ್ಲಿ ಟೈಲರಿಂಗ್ ಘಟಕ ನಡೆಸುತ್ತಿರುವ ಅನ್ಸಿಯಾ ಹಾಗೂ ಇನ್ನಿಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಜಗಳವಾಡುತ್ತಿದ್ದರು. ಈ ವೇಖರ ಮಹಿಳೆಯರು ನಿಂದಿಸುತ್ತಿರುವುದು, ಕಲ್ಲು ತೂರಾಟವೂ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಜಗಳದ ವಿಡಿಯೋವನ್ನು ವಿಜಿತ್ ರೆಕಾರ್ಡ್ ಮಾಡಿದ್ದಾನೆ ಎಂದು ಅನ್ಸಿಯಾ ಶಂಕಿಸಿದ್ದಾಳೆ. ಆದ್ದರಿಂದ ಆಕೆ ಆಟೋ ನಿಲ್ದಾಣಕ್ಕೆ ಬಂದು ವೀಡಿಯೋ ರೆಕಾರ್ಡ್ ಬಗ್ಗೆ ಪ್ರಶ್ನಿಸಿದ್ದಾಳೆ. ಆದರೆ ತಾನು ವಿಡಿಯೋ ರೆಕಾರ್ಡ್ ಮಾಡಿಲ್ಲ ಎಂದು ವಿಜಿತ್ ಹೇಳಿದರೂ ಕೇಳದ ಅನ್ಸಿಯಾ, ಕಬ್ಬಿಣದ ಸಲಾಕೆಯಿಂದ ಹಲ್ಲೆಗೈದು, ಅಲ್ಲಿಂದ ಪರಾರಿಯಾಗಿದ್ದಾಳೆ. ಘಟನಾ ಸ್ಥಳದಲ್ಲಿದ್ದವರು ತಕ್ಷಣ ವಿಜಿತ್‌ನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

ಅನ್ಸಿಯಾರೊಂದಿಗೆ ಜಗಳವಾಡಿದ ಮಹಿಳೆಯರಿಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಅನ್ಸಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

Ads on article

Advertise in articles 1

advertising articles 2

Advertise under the article