
ಕೋರ್ಟ್ ಆವರಣದಲ್ಲಿಯೇ ಪತ್ನಿ ಮುಖಕ್ಕೆ ಆ್ಯಸಿಡ್ ಎರಚಿದ ಪತಿ....!
ತಮಿಳುನಾಡು: ನ್ಯಾಯಾಲಯದ ಆವರಣದಲ್ಲಿಯೇ ಪತ್ನಿಯ ಮುಖಕ್ಕೆ ಪತಿಯೇ ಆ್ಯಸಿಡ್ ಎರಚಿರುವ ಘಟನೆ ತಮಿಳುನಾಡಿನ ಕೊಯಮತ್ತೂರುನಲ್ಲಿ ನಡೆದಿದೆ.
ಚಿತ್ರಾ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ. ಶಿವಕುಮಾರ್ ಆ್ಯಸಿಡ್ ಎರಚಿದ ಆರೋಪಿ. ವೈಯಕ್ತಿಕ ಕಾರಣಗಳಿಂದ ತನ್ನ ಪತಿಯ ಮೇಲೆ ಚಿತ್ರಾ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದ್ದರಿಂದ ಆಕೆ ವಿಚಾರಣೆಗೆ ಬಂದಿರುವ ವೇಳೆ ಆ್ಯಸಿಡ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ವಿಚಾರಣೆಗೆಂದು ಕೋರ್ಟ್ ಗೆ ಬಂದಿರುವ ಪತಿ ಶಿವಕುಮಾರ್ ನೀರಿನ ಬಾಟಲಿಯಲ್ಲಿ ಆ್ಯಸಿಡ್ ತುಂಬಿಸಿಕೊಂಡು ಬಂದಿದ್ದಾನೆ. ಇನ್ನೇನು ವಿಚಾರಣೆ ಆರಂಭಗೊಳ್ಳಬೇಕೆನ್ನುವಷ್ಟರ ಹೊತ್ತಿಗೆ ಶಿವಕುಮಾರ್ ಪತ್ನಿ ಚಿತ್ರ ಮುಖದ ಮೇಲೆ ಆ್ಯಸಿಡ್ ಎರಚಿದ್ದಾನೆ.
ತಕ್ಷಣ ಅಲ್ಲಿದ್ದ ಜನರು ಆರೋಪಿ ಶಿವಕುಮಾರ್ ನನ್ನು ಹಿಡಿದು ಥಳಿಸಲು ಯತ್ನಿಸಿದ್ದಾರೆ. ಇದೀಗ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತೇವೆಂದು ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.