-->
ಅಬ್ಬಬ್ಬಾ !  ಈತ ಆರ್ಡರ್ ಮಾಡಿದ್ದು 8,428 ಪ್ಲೇಟ್‌ ಇಡ್ಲಿ … ಆತ ಹಣ ಪಾವತಿಸಿದ್ದು ಎಷ್ಟು ಗೊತ್ತಾ?

ಅಬ್ಬಬ್ಬಾ ! ಈತ ಆರ್ಡರ್ ಮಾಡಿದ್ದು 8,428 ಪ್ಲೇಟ್‌ ಇಡ್ಲಿ … ಆತ ಹಣ ಪಾವತಿಸಿದ್ದು ಎಷ್ಟು ಗೊತ್ತಾ?

 


 

ಇಡ್ಲಿ ದಕ್ಷಿಣ ಭಾರತದ ಜನಪ್ರಿಯ ಆಹಾರ. ಈ ಜನಪ್ರಿಯ ಆಹಾರವನ್ನು ಇಲ್ಲೊಬ್ಬ ವ್ಯಕ್ತಿ ವರ್ಷದ 365 ದಿನದಲ್ಲಿ ಸುಮಾರೂ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿರುವುದು ತಿಳಿದು ಬಂದಿದೆ.

 

ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನ(World Idli Day) ಅಂಗವಾಗಿ ಆನ್ಲೈನ್ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಒಂದು ವರ್ಷದಲ್ಲಿ ಆರ್ಡರ್ ಮಾಡಲಾಗಿರುವ ಇಡ್ಲಿಯ ವಿವರದ ವರದಿಯನ್ನು  ಬಿಡುಗಡೆ ಮಾಡಿತ್ತು.  ಸ್ವಿಗ್ಗಿ ಸಮೀಕ್ಷೆಯ ಪ್ರಕಾರ ವ್ಯಕ್ತಿಯೊಬ್ಬರು ಒಂದು ವರ್ಷದೊಳಗೆ 8  ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಗಳನ್ನು ಆರ್ಡರ್ ಮಾಡಿರುವುದು ಬೆಳಕಿಗೆ  ಬಂದಿದೆ.  ಹೈದರಾಬಾದ್ ವ್ಯಕ್ತಿ ಒಂದು ವರ್ಷದಲ್ಲಿ ತನ್ನ ಗೆಳೆಯರು ಮತ್ತು ಕುಟುಂಬ ಸದಸ್ಯರಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದಾರೆ, ಇದಕ್ಕಾಗಿ ಅವರು ಆರು ಲಕ್ಷ ರೂಪಾಯಿ  ಹಣವನ್ನು ಪಾವತಿಸಿದ್ದಾರೆ.

ಇಡ್ಲಿಯನ್ನು ಹೆಚ್ಚಾಗಿ ಆರ್ಡರ್ ಮಾಡುವ ವಿಶ್ವದ ಮೂರು ಪ್ರಮುಖ ನಗರಗಳೆಂದರೆ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಎಂದು ತಿಳಿದುಬಂದಿದೆ ಎಂದು ಸ್ವಿಗ್ಗಿ ತಿಳಿಸಿದೆ.

 

2022 ವರ್ಷದ ಅಂತ್ಯದ ವೇಳೆಗೆ ಸ್ವಿಗ್ಗಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ ವರ್ಷ ಅತೀ ಹೆಚ್ಚು ಗ್ರಾಹಕರು ಆರ್ಡರ್ ಮಾಡಿರುವ ಆಹಾರಗಳ ವಿವರದಲ್ಲಿ ಬಿರಿಯಾನಿ ಮೊದಲ ಸ್ಥಾನದಲ್ಲಿತ್ತು.

ಆದರೆ ಇದೀಗಾ ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದು ಭಾರೀ  ಕುತೂಹಲಕ್ಕೆ ಕಾರಣ ಆಗಿದೆ. ಕೇವಲ ಇಡ್ಲಿಗಾಗಿಯೇ ಈತ ಒಂದು ವರ್ಷದಲ್ಲಿ 6 ಲಕ್ಷದಷ್ಟು ಹಣವನ್ನು ಖರ್ಚು ಮಾಡಿದ್ದು, ಸ್ವಿಗ್ಗಿ ಬಿಡುಗಡೆ ಮಾಡಿದ ಸಮೀಕ್ಷೆಯ ಕೆಲ ಹೊತ್ತಿಗೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕುತೂಹಲಕಾರಿ ಸಂಗತಿ ಎಂದರೆ ಮಸಾಲಾ ದೋಸೆಯ ನಂತರ ಇಡ್ಲಿ ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರವಾಗಿದೆ ಎಂದು ವರದಿ ತಿಳಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article