-->

ಯೂಟ್ಯೂಬ್ ವೀಡಿಯೋಗಳನ್ನು ಲೈಕ್ ಮಾಡುವ ಉದ್ಯೋಗ ಕೊಡಿಸುವ ಭರವಸೆ ನೀಡಿ ಯುವತಿಗೆ 11 ಲಕ್ಷ ರೂ. ವಂಚನೆ

ಯೂಟ್ಯೂಬ್ ವೀಡಿಯೋಗಳನ್ನು ಲೈಕ್ ಮಾಡುವ ಉದ್ಯೋಗ ಕೊಡಿಸುವ ಭರವಸೆ ನೀಡಿ ಯುವತಿಗೆ 11 ಲಕ್ಷ ರೂ. ವಂಚನೆ


ಮುಂಬೈ: ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡುವ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ಬಳಿಕ ಉತ್ತಮ ಆದಾಯವಿರುವ ತಮ್ಮ ವ್ಯಾಪಾರಿ ಗುಂಪನ್ನು ಸೇರುವಂತೆ ಆಮಿಷವೊಡ್ಡಿ 29 ವರ್ಷದ ಯುವತಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. 

ಪುಣೆ ಮೂಲದ ಬಿಂದುಸಾರ್ ಶೆಲಾರ್ (40), ಮಹೇಶ್ ರಾವತ್ (24), ಯೋಗೇಶ್ ಬೌಲೆ (28) ಹಾಗೂ ಅಮರಾವತಿ ಮೂಲದ ಅಕ್ಷಯ್ ಖಡೈ (27) ಮತ್ತು ಅಮಿತ್ ತವರ್ (28) ವಂಚನೆ ಮಾಡಿರುವ ಆರೋಪಿಗಳು.

ಅಸ್ತಿತ್ವದಲ್ಲಿಲ್ಲದ ಆರು ತಂತ್ರಜ್ಞಾನ ಕಂಪೆನಿಗಳ ಐದು ನಿರ್ದೇಶಕರೆಂದು ಹೇಳಿಕೊಂಡಿರುವ ಆರೋಪಿಗಳು ಮಹಿಳೆಯ ಹೆಸರಿನಲ್ಲಿ ವರ್ಚುವಲ್ ವ್ಯಾಲೆಟ್ ಸೃಷ್ಟಿಸಿ ಆಕೆ ಹಣ ಗಳಿಸುತ್ತಿರುವಂತೆ ನಂಬಿಸಿದ್ದಾರೆ. ಬಳಿಕ ಆಕೆಯ ಖಾತೆಯನ್ನು ತಡೆ ಹಿಡಿಯಲಾಗಿದೆ ಎಂದು ಮುಂಬೈ ಪೊಲೀಸರ ಹೆಸರಲ್ಲಿ ಆಕೆಗೆ ಪತ್ರ ರವಾನಿಸಿದ್ದಾರೆ. ಆಕೆಯ ಖಾತೆಯನ್ನು ಮರು ಚಾಲನೆ ಮಾಡಲು ಆಕೆಯಿಂದ ಎರಡು ವಾರಗಳ ಅಂತರದಲ್ಲಿ 11.4 ಲಕ್ಷ ರೂ. ನಗದು ಪಡೆದು, ವಂಚಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ, ಮಹಿಳೆಯು ಉದ್ಯೋಗಕ್ಕಾಗಿ ಎರಡು ಉದ್ಯೋಗ ಜಾಲತಾಣಗಳಲ್ಲಿ ತಮ್ಮ ಬಯೋಡೇಟಾ ಅಪ್ಲೋಡ್ ಮಾಡಿರುವ ಸಂಗತಿ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್ ಸಂದೇಶ ಕಳಿಸಿ, ನೀವೇನಾದರೂ ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡಿ, ಅದರ ಸ್ಟೀನ್ ಶಾಟ್‌ಗಳನ್ನು ಇದೇ ವಾಟ್ಸ್ ಆ್ಯಪ್ ಸಂಖ್ಯೆಗೆ ಕಳಿಸುವ ಕೆಲಸ ಮಾಡಲು ಇಚ್ಛಿಸುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಬಳಿಕ ಆಕೆಗೆ ವೀಡಿಯೊ ಕೊಂಡಿಯೊಂದನ್ನು ಕಳಿಸಿರುವ ವ್ಯಕ್ತಿಯ ಸೂಚನೆಯಂತೆ ಆ ವಿಡಿಯೊವನ್ನು ಲೈಕ್ ಮಾಡಿ, ಆತನ ಇನ್ನಿತರ ಸೂಚನೆಗಳನ್ನು ಆ ಮಹಿಳೆ ಅನುಸರಿಸಿದ್ದಾರೆ. ಆಗ ಆರೋಪಿಯು ಆಕೆಯ ಖಾತೆಗೆ  750 ರೂ. ಜಮಾ ಮಾಡಿದ್ದಾನೆ. ಬಳಿಕ ಆರೋಪಿ ಟೆಲಿಗ್ರಾಮ್ ಖಾತೆಯೊಂದಕ್ಕೆ ಆಕೆಯನ್ನು ಸೇರ್ಪಡೆ ಮಾಡಿದ್ದಾನೆ.

ಅದಾದ ಬಳಿಕ ಆರೋಪಿ ಯುವತಿಯ ಹೆಸರಿನಲ್ಲಿ ವರ್ಚುಯಲ್ ಖಾತೆಯೊಂದನ್ನು ತೆರೆದಿದ್ದಾನೆ. ಆ ಖಾತೆಯಲ್ಲಿ ಅದಾಗಲೇ 3 ಲಕ್ಷ ರೂ. ಇರುವುದು ಕಂಡು ಬಂದಿದೆ. ನಂತರ ಆಕೆಗೆ ತಮ್ಮ ವ್ಯಾಪಾರಿ ಬಂಡವಾಳದಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ, ವಿಭಿನ್ನ ಶುಲ್ಕವನ್ನು ಪಾವತಿಸುವಂತೆ ಕೇಳಲಾಗಿದೆ. ತದನಂತರ ಮುಂಬೈ ಪೊಲೀಸರ ಹೆಸರಲ್ಲಿ ಆಕೆಗೆ ಪತ್ರವೊಂದನ್ನು ರವಾನಿಸಿರುವ ಆರೋಪಿಗಳು, ಆಕೆಯ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅದನ್ನು ತೆರವು ಮಾಡಬೇಕಿದ್ದರೆ ಹಣ ಕಳಿಸಬೇಕು ಎಂದು ಬೆದರಿಕೆ ಒಡ್ಡಿದ್ದಾರೆ.

ಅಷ್ಟೊತ್ತಿಗೆ ತನ್ನ ಹೂಡಿಕೆ ಹಾಗೂ ಲಾಭವನ್ನು ಹಿಂಪಡೆಯಲು ಮುಂದಾಗುವ ಮುನ್ನ ಆ ಮಹಿಳೆಯು 11.4 ಲಕ್ಷ ರೂ. ಕಳೆದುಕೊಂಡಿದ್ದಳು. ಹೀಗಿದ್ದೂ ತನ್ನ ವ್ಯಾಲೆಟ್ ಅನ್ನು ಲಾಕ್ ಮಾಡಿರುವ ಆ ಮಹಿಳೆಯು, ನಂತರ ಆರೋಪಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿದ್ದಾಳೆ. ಆರೋಪಿಗಳ ಬ್ಯಾಂಕ್ ಖಾತೆ ಮಾಹಿತಿಯನ್ನಾಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article