-->
1000938341
10 ನೇ ತರಗತಿ ಪಾಸಾದಾವರಿಗೆ ಇಲ್ಲಿದೆ ಉದ್ಯೋಗವಕಾಶ

10 ನೇ ತರಗತಿ ಪಾಸಾದಾವರಿಗೆ ಇಲ್ಲಿದೆ ಉದ್ಯೋಗವಕಾಶ

 



Ayush Department Hassan Recruitment 2023: ವಿವಿಧ ಹುದ್ದೆ ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 19 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು OFFLINE ಮೂಲಕ ಅರ್ಜಿ ಸಲ್ಲಿಸಬೇಕು.



ಹಾಸನದ ಆಯುಷ್ ಇಲಾಖೆಯು ಸ್ಪೆಷಲಿಸ್ಟ್ ಡಾಕ್ಟರ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು  ಹೊರಡಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 18 CHO, ಸ್ಪೆಷಲಿಸ್ಟ್ ಡಾಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 19 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 


ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು? ಆಯ್ಕೆಯಾದರೆ ಸಿಗುವ ಮಾಸಿಕ ವೇತನ ಎಷ್ಟು? ಶೈಕ್ಷಣಿಕ ಅರ್ಹತೆಗಳೇನು? ವಯೋಮಿತಿ ಎಷ್ಟು? ಎಂಬಿತ್ಯಾದಿ  ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.


ಹುದ್ದೆಗಳ ವಿವರಗಳು:


ಸಂಸ್ಥೆಯ ಹೆಸರು : ಆಯುಷ್ ಇಲಾಖೆ ಹಾಸನ

ಹುದ್ದೆಗಳ ಸಂಖ್ಯೆ: 18

ಉದ್ಯೋಗ ಸ್ಥಳ: ಹಾಸನ 

ಹುದ್ದೆ ಹೆಸರು: CHO, ಸ್ಪೆಷಲಿಸ್ಟ್ ಡಾಕ್ಟರ್

ಹುದ್ದೆಗಳ ವಿಭಾಗವಾರು ಮಾಹಿತಿ:

ತಜ್ಞ ವೈದ್ಯರು- 3 ಹುದ್ದೆಗಳು

ಫಾರ್ಮಾಸಿಸ್ಟ್- 7 ಹುದ್ದೆಗಳು

ಮಸಾಜಿಸ್ಟ್- 3 ಹುದ್ದೆಗಳು

ಕ್ಷರಸೂತ್ರ ಅಟೆಂಡರ್- 1 ಹುದ್ದೆ

ಸ್ತ್ರೀರೋಗ ಅಟೆಂಡರ್- 1 ಹುದ್ದೆ

ವಿವಿಧೋದ್ದೇಶ ಕೆಲಸಗಾರ- 1 ಹುದ್ದೆ

ಸಮುದಾಯ ಆರೋಗ್ಯ ಅಧಿಕಾರಿ (CHO)- 2 ಹುದ್ದೆಗಳು


ಶೈಕ್ಷಣಿಕ ಅರ್ಹತೆಗಳು:


ತಜ್ಞ ವೈದ್ಯರು- BNYS, BAMS, MD, MS, ಸ್ನಾತಕೋತ್ತರ ಪದವಿ ಮಾಡಿರಬೇಕು.

ಫಾರ್ಮಾಸಿಸ್ಟ್- 10ನೇ ತರಗತಿ ಪಾಸಾಗಿರಬೇಕು. ಅಥವಾ ಡಿಪ್ಲೊಮಾ ಮಾಡಿರಬೇಕು.

ಮಸಾಜಿಸ್ಟ್- 7ನೇ ತಗರತಿ ಪಾಸಾಗಿರಬೇಕು.

ಕ್ಷರಸೂತ್ರ ಅಟೆಂಡರ್- 10ನೇ ತರಗತಿ ಪಾಸಾಗಿರಬೇಕು.

ಸ್ತ್ರೀರೋಗ ಅಟೆಂಡರ್- 10ನೇ ತರಗತಿ ಪಾಸಾಗಿರಬೇಕು.

ವಿವಿಧೋದ್ದೇಶ ಕೆಲಸಗಾರ- 10ನೇ ತರಗತಿ ಪಾಸಾಗಿರಬೇಕು.

ಸಮುದಾಯ ಆರೋಗ್ಯ ಅಧಿಕಾರಿ (CHO)- BAMS ಮಾಡಿರಬೇಕು.


ಮಾಸಿಕ ವೇತನ:


ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ.10300 ರಿಂದ 35000/- ರೂ.ವರೆಗೆ ಮಾಸಿಕ ವೇತನ ಸಿಗಲಿದೆ.


ವಯೋಮಿತಿ:


ಆಯುಷ್ ಇಲಾಖೆ ಹಾಸನ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ 18 ವರ್ಷದಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.


ವಯೋಮಿತಿ ಸಡಿಲಿಕೆ:


SC/ST ಅಭ್ಯರ್ಥಿಗಳಿಗೆ: 05 ವರ್ಷಗಳು

Cat-I/2A/2B/3A & 3B ಅಭ್ಯರ್ಥಿಗಳಿಗೆ: 3 ವರ್ಷಗಳು


ಪ್ರಮುಖ ದಿನಾಂಕ:


ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಏಪ್ರಿಲ್ 19, 2023


ಅರ್ಜಿಯನ್ನು ಸಲ್ಲಿಸುವುದು ಹೇಗೆ?


ಈ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಪ್ರಮುಖ ದಾಖಲಾತಿ ಪ್ರತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.


ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ:


District Ayush Office, Penshan Mohalla, Hassan, Karnataka, 573201


ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್‌ಗಳು:


ಅಧಿಕೃತ ಅಧಿಸೂಚನೆ ಪರಿಶೀಲಿಸಲು: ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್: hassan.nic.in

Ads on article

Advertise in articles 1

advertising articles 2

Advertise under the article