-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಯುವತಿಯ ಬಾಳಿಗೆ ಬೆಂಕಿಯಿಟ್ಟ ಫೈರ್ ಮ್ಯಾನ್

ಯುವತಿಯ ಬಾಳಿಗೆ ಬೆಂಕಿಯಿಟ್ಟ ಫೈರ್ ಮ್ಯಾನ್


ವಿಜಯಪುರ: ಈತ ಫೈರ್ ಮ್ಯಾನ್ ಆಗಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾನೆ. ಆದರೆ ಯುವತಿಯೊಬ್ಬಳನ್ನು ಪ್ರೀತಿಸಿದ ಆತ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ಇದೀಗ ನಿನ್ನೊಂದಿಗೆ ಟೈಂಪಾಸ್ ಗೆ  ಲವ್ ಮಾಡಿದೆ ಎಂದು ಆಕೆಯ ಬಾಳಿಗೆ ಬೆಂಕಿ ಇಟ್ಟಿದ್ದಾನೆ. 

ಈ ಕೃತ್ಯವೆಸಗಿದಾತನ ಹೆಸರು ಸಚಿನ್ ರಾಠೋಡ್ ಎಂದು. ಈತ ಭಟ್ಕಳ ಅಗ್ನಿಶಾಮಕ ದಳದಲ್ಲಿ ಕರ್ತವ್ಯದಲ್ಲಿದ್ದಾನೆ. ದೇವರ ಹಿಪ್ಪರಗಿ ಠಾಣೆ ವ್ಯಾಪ್ತಿಯ ನಿವಾಸಿ ಯುವತಿಯೋರ್ವಳಿಗೆ ಮೋಸ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ. ಇವರಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆ ಯುವತಿಯನ್ನೇ ಮದುವೆಯಾಗುವುದಾಗಿ ನಂಬಿಸಿದ್ದ ಸಚಿನ್ ದೈಹಿಕ ಸಂಪರ್ಕವನ್ನು ಕೂಡ ಬೆಳೆಸಿದ್ದ. ತನಗೆ ಪ್ರಮೋಷನ್ ಆದ ತಕ್ಷಣ ಮದುವೆ ಆಗುವುದಾಗಿ ಹೇಳಿ ನಂಬಿಸಿದ್ದ.

ಆದರೆ ಇತ್ತೀಚೆಗೆ ಆಕೆಯನ್ನು ದೂರ ಮಾಡುತ್ತಿರುವ ಸಚಿನ್ 'ನೀನು ನನಗೆ ಬರೇ ಟೈಂ ಪಾಸ್. ಬೇಕಿದ್ದರೆ ಒಂದಿಷ್ಟು ಹಣ ಕೊಡುತ್ತೇನೆ' ಎಂದು ಸಚಿನ್ ಹೇಳಿದ್ದಾನೆ. ಅಷ್ಟೇ ಅಲ್ಲದೇ, ಈತನ ಮಾತಿಗೆ ಆತನ ಕುಟುಂಬಸ್ಥರೂ ಬೆಂಬಲ ನೀಡಿದ್ದಾರೆ. ಯುವತಿ ಮಾತ್ರ ತನಗೆ ಹಣ ಬೇಡ, ಸಚಿನ್ ನೊಂದಿಗೆ ಮದುವೆ ಮಾಡಿಸಿ ಎನ್ನುತ್ತಿದ್ದಾಳೆ. ತನಗಾದ ಅನ್ಯಾಯದ ಕುರಿತು ನೊಂದ ಯುವತಿ ಜಿಲ್ಲಾಧಿಕಾರಿ ಬಳಿ ಮೊರೆ ಹೋಗಿದ್ದು ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿಗೆ ಯುವತಿಯ ಸಹೋದರಿಯನ್ನು ಮದುವೆ ಮಾಡಿ ಕೊಡಲಾಗಿತ್ತು. ಅಕ್ಕನ ಊರಿಗೆ ಹೋಗಿದ್ದ ವೇಳೆ ಅದೇ ಊರಿನ ಸಚಿನ್ ರಾಠೋಡ್ ಪರಿಚಯವಾಗಿದ್ದ. ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ. ನಾನಾ ಕಾರಣಗಳನ್ನು ಹೇಳಿ ಯುವತಿಯ ಬಳಿಯಿಂದ ಸಾಕಷ್ಟು ಹಣವನ್ನೂ ಪಡೆದಿದ್ದಾನೆ. ಆದರೆ ಎಲ್ಲ ಮುಗಿದ ಬಳಿಕ ಇದೀಗ ಈ ಫೈರ್‌ಮನ್ ಕೈ ಬಿಟ್ಟಿದ್ದು ಯುವತಿಯ ಬಾಳಿಗೆ ಬೆಂಕಿ ಹಚ್ಚಿದ್ದಾನೆ.

ಕಳೆದ ನಾಲ್ಕು ವರ್ಷಗಳಲ್ಲಿ ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಹಾಗೂ ಭಟ್ಕಳಕ್ಕೆ ಕರೆಸಿಕೊಂಡು ಸಾಕಷ್ಟು ಬಾರಿ ದೈಹಿಕ ಸಂಪರ್ಕವನ್ನು ಸಚಿನ್ ಮಾಡಿದ್ದಾನೆ. ಈಗ ಮಾತ್ರ ವರಸೆ ಬದಲಾಯಿಸಿ ಕೈ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೆ ನೇರವಾಗಿ ನೀನು ಬರೆ ಟೈಂ ಪಾಸ್ ಎಂದಿದ್ದು ಹಣ ನೀಡಲು ಮುಂದಾಗಿದ್ದಾನೆ. ದೂರು ದಾಖಲಿಸಿದರೂ ಪೊಲೀಸರು ಆತನನ್ನು ಬಂಧಿಸಿಲ್ಲ ಎಂದು ಯುವತಿ ಆರೋಪಿಸಿದ್ದು ಇದೀಗ ಆಕೆ ನ್ಯಾಯಕ್ಕಾಗಿ ವಿಜಯಪುರ ಡಿಸಿ ಕಚೇರಿ ಬಳಿ ಕುಳಿತಿದ್ದಾಳೆ.

Ads on article

Advertise in articles 1

advertising articles 2

Advertise under the article

ಸುರ