ಸೂರ್ಯನ ರಾಶಿ ಪರಿವರ್ತನೆಯಿಂದ ಈ 3 ರಾಶಿಯವರಿಗೆ ಉದ್ಯೋಗದಲ್ಲಿ ಅಧಿಕ ಲಾಭ! ಪ್ರಮೋಷನ್ ಸಾಧ್ಯತೆ!
Saturday, February 4, 2023
ವೃಷಭ ರಾಶಿ: ಸೂರ್ಯ ದೇವರ ಸಂಕ್ರಮಣದಿಂದಾಗಿ ವೃಷಭ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಬಹಳ ದಿನಗಳಿಂದ ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದ ಈ ರಾಶಿಯವರಿಗೆ ಒಳ್ಳೆಯ ಉದ್ಯೋಗಾವಕಾಶಗಳು ಒದಗಿ ಬರಲಿವೆ. ನೀವು ಉತ್ತಮ ಕಂಪನಿಯಿಂದ ಉದ್ಯೋಗ ಪ್ರಸ್ತಾಪ ಪತ್ರವನ್ನು ಪಡೆಯಬಹುದು.
ಕನ್ಯಾ ರಾಶಿ: ಗ್ರಹಗಳ ರಾಜನ ಈ ಸಂಕ್ರಮಣ ಸಮಾಜದಲ್ಲಿ ನಿಮ್ಮ ಘನತೆ ಗೌರವವನ್ನು ಹೆಚ್ಚಿಸಲಿದೆ. ನಿಮ್ಮ ಹೋರಾಟಕ್ಕೆ ನೀವು ಪ್ರತಿಫಲವನ್ನು ಪಡೆಯುವ ಸಮಯ ಇದು. ವಿರೋಧಿಗಳು ನಿಮ್ಮ ವಿರುದ್ಧ ಪಿತೂರಿಗಳನ್ನು ನಡೆಸುತ್ತಾರೆ. ನಿಮ್ಮ ನಡವಳಿಕೆ ಮತ್ತು ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಸಮಾಜದಲ್ಲಿ ಒಳ್ಳೆಯ ಇಮೇಜ್ ನಿಮ್ಮದಾಗಲಿದೆ.
ಧನು ರಾಶಿ: ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರ ಧನು ರಾಶಿಯ ಜನರ ಅದೃಷ್ಟವನ್ನು ಹೆಚ್ಚಿಸಲಿದೆ. ಈ ರಾಶಿಯ ಜನರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ಸಮಯ ನಿಮ್ಮದಾಗಿದೆ. ಹೀಗಾಗಿ ಸಂಪೂರ್ಣ ಪರಿಶ್ರಮದಿಂದ ಸಿದ್ಧತೆಯನ್ನು ಮುಂದುವರಿಸಿ, ಒಳ್ಳೆಯ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ.