ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು: ಮಾಜಿ ಸಿಎಂ ವೀರಪ್ಪ ಮೊಯಿಲಿ ಕಾರ್ಕಳದಿಂದ ಸ್ಪರ್ಧಿಸಲಿದ್ದಾರೆಯೇ...? ಸ್ವತಃ ಹೇಳಿದ್ದೇನು


ಮಂಗಳೂರು: ಮಾಜಿ ಸಿಎಂ ವೀರಪ್ಪ ಮೊಯಿಲಿ ಕಾರ್ಕಳದಿಂದ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ವಿಚಾರ ಸದ್ದು ಮಾಡುತ್ತಿತ್ತು. ಇದೀಗ ಈ ವಿಚಾರದ ಬಗ್ಗೆ ಅವರೇ ಪ್ರತಿಕ್ರಿಯಿಸಿ ಹೇಳಿಕೆ ನೀಡಿದ್ದಾರೆ.

ಇಂದು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾರ್ಕಳದಲ್ಲಿ ನಾನು ವಿಧಾನಸಭೆ ಚುನಾವಣೆ ಎದುರಿಸುತ್ತಿಲ್ಲ. ಮಾತ್ರವಲ್ಲ ನಾನು ಹಾಗೂ ನನ್ನ ಪುತ್ರ ವಿಧಾನಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸುತ್ತಿಲ್ಲ ಎಂದು ವೀರಪ್ಪ ಮೊಯಿಲಿ ಹೇಳಿದರು.

ಈಗಾಗಲೇ ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧಿಸುವ ಸುದ್ದಿ ಭಾರೀ ಪ್ರಚಾರದಲ್ಲಿದೆ. ಕಾರ್ಕಳವನ್ನು ಸಚಿವ ಸುನಿಲ್ ಕುಮಾರ್ ಅವರು ತಮ್ಮ ಭದ್ರಕೋಟೆಯನ್ನಾಗಿಸಿದ್ದಾರೆ. ಈ ನಡುವೆ ಕಾರ್ಕಳ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕಾರ್ಕಳದಲ್ಲಿ ತಾನು‌ ಶಾಸಕನಾಗುವೆ ಎಂದು ಪ್ರಮೋದ್ ಮುತಾಲಿಕ್ ಕೇಳಿಕೊಂಡಿದ್ದಾರೆ. ಆದರೆ ಸುನಿಲ್ ಕುಮಾರ್ ಅವರು ತಾನು ಕಾರ್ಕಳ ಹೊರತುಪಡಿಸಿ ಬೇರೆಲ್ಲೂ ಸ್ಪರ್ಧಿಸೋಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.