-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Sulya:- ಪುಟಾಣಿ ಅಯ್ಯಪ್ಪ ಸ್ವಾಮಿಯ ಕೈ ಹಿಡಿದ ಮುಸ್ಲಿಂ ಅಜ್ಜ. ಸೌಹಾರ್ದತೆಗೆ ಸಾಕ್ಷಿ ಈ ಚಿತ್ರ..!

Sulya:- ಪುಟಾಣಿ ಅಯ್ಯಪ್ಪ ಸ್ವಾಮಿಯ ಕೈ ಹಿಡಿದ ಮುಸ್ಲಿಂ ಅಜ್ಜ. ಸೌಹಾರ್ದತೆಗೆ ಸಾಕ್ಷಿ ಈ ಚಿತ್ರ..!

ಸುಳ್ಯ

ಕೋಮು ವ್ಯವಸ್ಥೆ ಹೆಚ್ಚಾಗಿರುವ ಕರಾವಳಿಯಲ್ಲಿ ಅಯ್ಯಪ್ಪ ಮಾಲಾಧಾರಿ ಪುಟ್ಟ ಹಿಂದೂ ಬಾಲಕನೊಬ್ಬನ ಕೈ ಹಿಡಿದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರು ನಡೆಯುತ್ತಿರುವ ದೃಶ್ಯಗಳು ಸುಳ್ಯದಲ್ಲಿ ಕಾಣಿಸಿದ್ದು ಇದು ಮೆಚ್ಚುಗೆಗೆ ಪಾತ್ರವಾಗಿದೆ.

ಅಯ್ಯಪ್ಪ ಮಾಲಾಧಾರಿಯಾದ ರಕ್ಷಿತ್ ಎಂಬವರ ಮಗ ನಾಲ್ಕು ವರ್ಷದ ಸೋನು ಎಂಬ ಬಾಲಕ ಈ ವರ್ಷ ಪ್ರಥಮವಾಗಿ ಶಬರಿಮಲೆಗೆ ಹೋಗಲು ಮಾಲೆ ಹಾಕಿದ್ದು, ಮಾಲೆ ಹಾಕಿ ತನ್ನ ಪರಿಚಯದ ಸುಮಾರು 80 ವರ್ಷದ ಮುಸ್ಲಿಂ ಅಜ್ಜ ಸುಳ್ಯದ ಕಲ್ಲುಗುಂಡಿಯಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಎಂಬವರ ಬಳಿಗೆ ಬಂದಿದ್ದಾನೆ. ಈ ಸಮಯದಲ್ಲಿ ವಾಹನ ಸಂಚಾರವಿದ್ದ ರಸ್ತೆ ದಾಟಲು ಕಷ್ಟಪಡುತ್ತಿದ್ದಾಗ ಇದನ್ನು ಗಮನಿಸಿದ ಇಬ್ರಾಹೀಂ ಅವರು ಬಾಲಕನನ್ನು ರಸ್ತೆ ದಾಟಿಸಿ ಮಾತನಾಡಿಸಿದರು. ಈ ಸಮಯದಲ್ಲಿ ಮಗು ತಾನು ಅಜ್ಜನನ್ನು ನೋಡಲು ಬಂದದ್ದಾಗಿ ಹೇಳಿದ್ದಾನೆ.ಖುಷಿಗೊಂಡ ಇಬ್ರಾಹಿಂ ಅವರು ಮಗುವನ್ನು ಸಮೀಪದ ಹಣ್ಣಿನ ಅಂಗಡಿ ಕರೆದೊಯ್ದು ಹಣ್ಣುಹಂಪಲು ನೀಡಿ ಉಪಚರಿಸಿ ರಸ್ತೆ ದಾಟಿಸಿ ಕಳುಹಿಸಿ ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಇಬ್ರಾಹಿಂ ಮೈಲಿಕಲ್ಲು ಅವರ ಪುತ್ರ ಸಿರಾಜ್ ಅವರು ತಂದೆಗೆ ಈಗಾಗಲೇ ಸುಮಾರು 80 ವರ್ಷ ವಯಸ್ಸು ಆದರೂ ಬಡವರ ಬಗ್ಗೆ ಮತ್ತು ಸಾಮಾಜಿಕ ಕಾಳಜಿ ಹೆಚ್ಚು. ಬೆಳಗ್ಗೆ ಬಂದು ಅಂಗಡಿ ಓಪನ್ ಮಾಡಿ ಬಡವರ, ಭಿಕ್ಷುಕರ ಸಹಾಯಕ್ಕೆ ಮತ್ತು ಸಾರ್ವಜನಿಕ ಕೆಲಸಗಳಲ್ಲಿ ನೆರವಾಗುತ್ತಾರೆ. ನಾವು ಎಲ್ಲೂ ಅವರ ಸಾಮಾಜಿಕ ಕಾಳಜಿಗೆ ಅಡ್ಡ ಬಂದಿಲ್ಲ. ಜಾತಿ, ಧರ್ಮ ಅಂತಹ ಯಾವುದೇ ವಿಷಯಗಳು ಅವರ ಮನಸ್ಸಲ್ಲಿ ಇಲ್ಲ. ಎಲ್ಲರೂ ಮನುಷ್ಯರು ಎನ್ನುವ ಭಾವನೆ ಮಾತ್ರ ಅವರದ್ದು. ರಕ್ಷಿತ್ ಸ್ವಾಮಿ ಮತ್ತು ಮಗು ಸೋನು ಸ್ವಾಮಿ ಇವತ್ತು ಶಬರಿಮಲೆಗೆ ಹೋಗಿದ್ದಾರೆ. ಅವರು ಹೋಗುವಾಗಲೂ ತಂದೆಯ ಬಳಿ ಬಂದು ಆಶೀರ್ವಾದ ಪಡೆದು ಹೋಗಿದ್ದಾರೆ. ನಗುತ್ತಲೇ ತಂದೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ ಇದಲ್ವೇ ಮಾನವ ಧರ್ಮ ಎಂದು ಹೇಳಿದರು.

ಇನ್ನು ಇಬ್ರಾಹೀಂ ಮೈಲಿಕಲ್ಲು ಅಯ್ಯಪ್ಪ ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸಿದ ವೇಳೆ ಯಾರೋ ಕ್ಕಿಕ್ಕಿಸಿದ ಫೋಟೋವೊಂದು ‘ಸೌಹಾರ್ದ ಸಾರುವ ಚಿತ್ರ’ ಎಂಬ ಅಡಿಬರಹದೊಂದಿಗೆ ಪ್ರಸ್ತುತ ವೈರಲ್ ಆಗುತ್ತಿದೆ.

Ads on article

Advertise in articles 1

advertising articles 2

Advertise under the article

ಸುರ