-->
1000938341
ಯುವ ಬಾಡಿಬಿಲ್ಡರ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಯುವ ಬಾಡಿಬಿಲ್ಡರ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ


ಬೆಂಗಳೂರು: ನಗರದ ಕೆ.ಆರ್.ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಯುವ ಬಾಡಿ ಬಿಲ್ಡರ್ ಮೃತದೇಹ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಶಂಕಾಸ್ಪದ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿಗೆ ವ್ಯಕ್ತವಾಗಿದೆ.

ಕೋಲಾರದ ಶ್ರೀನಿವಾಸಪುರ ಮೂಲದ ಶ್ರೀನಾಥ್ ಮೃತ ಯುವ ದೇಹದಾರ್ಢ್ಯ ಪಟು ಎಂದು ಗುರುತಿಸಲಾಗಿದೆ. ಶ್ರೀನಾಥ್ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಓದಿನೊಂದಿಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ, ಜ.10ರಂದು ಅವರು ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರಿನಾಥ್ ಮೃತದೇಹ ಪತ್ತೆಯಾಗಿದೆ.

ಇದೀಗ ಈ ಆತ್ಮಹತ್ಯೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾವಿನ ಬಗ್ಗೆ ಶ್ರೀನಾಥ್ ಪಾಲಕರು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ಬಳಿಕ ಸಾವಿಗೆ ನಿಖರ ಕಾರಣ ಏನು ಎಂದು ತಿಳಿದುಬರಲಿದೆ.

Ads on article

Advertise in articles 1

advertising articles 2

Advertise under the article