ವಿಮಾನ ಯಾನದ ವೇಳೆ ಮಹಿಳೆಯ ಮೇಲೆ ಮೂತ್ರ ಮಾಡಿದ ವ್ಯಕ್ತಿ ತನ್ನ ದೊಡ್ಡ ಮಟ್ಟದ ಹುದ್ದೆಯನ್ನೇ ಕಳೆದುಕೊಂಡ



ಮುಂಬೈ: ಏರ್ ಇಂಡಿಯಾ ವಿಮಾನ ಯಾನದ ವೇಳೆ ಬಿಜಿನೆಸ್ ಕ್ಲಾಸ್‌ನಲ್ಲಿದ್ದ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ತನ್ನ ಖಾಸಗಿ ಅಂಗವನ್ನು ಪ್ರದರ್ಶನ ಮಾಡಿ ದುರ್ವತನೆ ತೋರಿದ ವ್ಯಕ್ತಿಯೀಗ ತನ್ನ ದೊಡ್ಡ ಹುದ್ದೆಯನ್ನೇ ಕಳೆದುಕೊಳ್ಳುವಂತಾಗಿದೆ.

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ಮಾಡಿದ್ದ ವ್ಯಕ್ತಿ ಮುಂಬೈ ಮೂಲದ ಶಂಕರ್ ಮಿಶ್ರಾ ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ಈತ ಈ ಕೃತ್ಯ ಎಸಗಿದ್ದ. ಹಾಗಾಗಿ ಆತನ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಆತ ಕ್ಯಾಲಿಫೋರ್ನಿಯಾ ಮೂಲದ ವೆಲ್ಸ್ ಫಾರ್ಗೊ ಎಂಬ ಅಮೆರಿಕನ್ ಮಲ್ಟಿನ್ಯಾಷನಲ್ ಕಂಪೆನಿಯ ಭಾರತ ವಿಭಾಗದ ಉಪಾಧ್ಯಕ್ಷನಾಗಿದ್ದ. ಆದರೆ ಮೂತ್ರ ವಿಸರ್ಜನೆಯ ಪ್ರಕರಣದಿಂದ ಇದೀಗ ಈ ಕಂಪೆನಿಯು ಆತನನ್ನು ಹುದ್ದೆಯಿಂದ ಕಿತ್ತು ಹಾಕಿದೆ.

ವೆಲ್ಸ್ ಫಾರ್ಗೋ ಉದ್ಯೋಗಿಗಳು ಅತ್ಯುನ್ನತ ಗುಣಮಟ್ಟದ ವೃತ್ತಿಪರರು. ಅಲ್ಲದೆ ವೈಯಕ್ತಿಕವಾಗಿಯೂ ಉತ್ತಮ ಸ್ವಭಾವದವರು. ಆದರೆ ಈ ಆರೋಪ ನಮಗೆ ನಿಜವಾಗಿಯೂ ಬಹಳ ಕಿರಿಕಿರಿ ಉಂಟು ಮಾಡಿದೆ. ಆದ್ದರಿಂದ ಆರೋಪಿಯನ್ನು ಕಂಪೆನಿಯಿಂದ ತೆಗೆದುಹಾಕಲಾಗಿದೆ ಎಂದು ವೆಲ್ಸ್ ಫಾರ್ಗೊ ಹೇಳಿದೆ.
BREAKING NEWS
Loading latest news...
Join our WhatsApp Channel Powered By : Online Pudu