-->
ಮಂಗಳೂರು: ಬಿಗ್ ಬಾಸ್ ನಲ್ಲಿಯೂ ಕೊರಗಜ್ಜನ ಸ್ಮರಣೆಯಲ್ಲಿಯೇ ಇದ್ದೆ: ರೂಪೇಶ್ ಶೆಟ್ಟಿ

ಮಂಗಳೂರು: ಬಿಗ್ ಬಾಸ್ ನಲ್ಲಿಯೂ ಕೊರಗಜ್ಜನ ಸ್ಮರಣೆಯಲ್ಲಿಯೇ ಇದ್ದೆ: ರೂಪೇಶ್ ಶೆಟ್ಟಿಮಂಗಳೂರು: "ಬಿಗ್ ಬಾಸ್ ನಲ್ಲಿ ಪ್ರತೀ ಟಾಸ್ಕ್ ಆಗುವಾಗಲೂ ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಸ್ಮರಣೆಯಲ್ಲಿಯೇ ಇದ್ದೆ. ಫೈನಲ್ ವೇಳೆ ಟಾಪ್ ಫೈವ್ ನಲ್ಲಿ ಬಂದರೆ ಕುತ್ತಾರುವಿನ ಆದಿಸ್ಥಳ ಕೊರಗಜ್ಜನ ಕಟ್ಟೆಗೆ ಬರುವುದಾಗಿ ಹರಕೆ ಹೊತ್ತಿದ್ದೆ'' ಇದು ಬಿಗ್ ಬಾಸ್ ಸೀಸನ್ -9ರ ವಿನ್ನರ್ ಕುಡ್ಲದ ಕುವರ ರೂಪೇಶ್ ಶೆಟ್ಟಿ ಮಾತು.

ಬಿಗ್ ಬಾಸ್ ಸೀಸನ್ - 9ರ ವಿನ್ನರ್ ಆಗಿ ಹೊರಹೊಮ್ಮಿರುವ ರೂಪೇಶ್ ಶೆಟ್ಟಿ ತಮ್ಮ ತವರು ನೆಲಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವೇಳೆ ಅವರು ಹೇಳಿದ ಮಾತಿದು. ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ರೂಪೇಶ್ ಶೆಟ್ಟಿ ಮಂಗಳೂರಿಗೆ ಕಾಲಿಟ್ಟ ತಕ್ಷಣ ಅವರು ಕೊರಗಜ್ಜನ ಕಟ್ಟೆಗೆ ಹೋಗಿ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದರು.


ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ವೇಳೆ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರಕಿತು. ‌ಆ ಬಳಿಕ ನಗರದ ನೆಹರೂ ಮೈದಾನದ ಬಳಿಯ ಎ.ಬಿ.ಶೆಟ್ಟಿ ವೃತ್ತದಿಂದ ಕುತ್ತಾರುವಿನ ಕೊರಗಜ್ಜನ ಕಟ್ಟೆಯವರೆಗೆ ಅವರು ವಾಹನ ಜಾಥಾದಲ್ಲಿ ವಿಜಯಯಾತ್ರೆ ನಡೆಯಿತು. ಈ ವಿಜಯಯಾತ್ರೆಯಲ್ಲಿ ರೂಪೇಶ್ ಶೆಟ್ಟಿಯವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಅಭಿಮಾನಿಗಳು ಬೈಕ್, ಸ್ಕೂಟರ್, ಕಾರುಗಳಲ್ಲಿ ರೂಪೇಶ್ ಶೆಟ್ಟಿಯವರಿಗೆ ಸಾಥ್ ನೀಡಿದರು.

ತಾವು ಬಿಗ್ ಬಾಸ್ ನಲ್ಲಿರುವಾಗಲೇ ರೂಪೇಶ್ ಶೆಟ್ಟಿಯವರು ತಾವು ಟಾಪ್ ಪೈವ್ ನಲ್ಲಿ ಬಂದಲ್ಲಿ ಮೊದಲಿಗೆ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ಬರುವುದಾಗಿ ಹರಕೆ ಹೊತ್ತಿದ್ದರಂತೆ. ಆದರೆ ಇದೀಗ ಅವರು ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ರೂಪೇಶ್ ಶೆಟ್ಟಿ ತಮ್ಮ ತವರಿಗೆ ಕಾಲಿಟ್ಟ ತಕ್ಷಣ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ತೆರಳಿದ್ದಾರೆ‌. ಅಲ್ಲದೆ ತಮಗೆ ಬಿಗ್ ಬಾಸ್ ನಿಂದ ದೊರೆತ ಹಣದಲ್ಲಿ ಅರ್ಧದಷ್ಟು ಬಡವರಿಗೆ ಮನೆ ಕಟ್ಟಲು ವಿನಿಯೋಗಿಸಲಾಗುತ್ತದೆ ಎಂದು ರೂಪೇಶ್ ಶೆಟ್ಟಿ ಹೇಳಿಕೊಂಡಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article