ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬೆಂಗಾಲಿ ಜೋಡಿಯ ಫೋಟೋ


ಹೊಸದಿಲ್ಲಿ: ಆರ್ಟಿಫಿಶಿಯಲ್ ಇಂಟೆಲಿ ಜೆನ್ಸ್ ತಂತ್ರಜ್ಞಾನದೊಂದಿಗೆ ರಚನೆಯಾಗುತ್ತಿರುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್‌ನಲ್ಲಿದೆ. ಈ ಕಲೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಇದೇ ತಂತ್ರಜ್ಞಾನವನ್ನು ಬಳಸಿ ರಚಿಸಲ್ಪಟ್ಟ ಬೆಂಗಾಲಿ ಮದುವೆಯ ಸಂಪ್ರದಾಯದ ಚಿತ್ರವೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆಂಗಾಲಿ ಜೋಡಿಯ ಫೋಟೋಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ಟ್ವಿಟರ್ ಬಳಕೆದಾರರೊಬ್ಬ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿ ದೇಶದ ವಿವಿಧ ವಿವಾಹ ಸಂಪ್ರದಾಯವನ್ನು ವಿವರಿಸುವ ಚಿತ್ರಗಳನ್ನು ರಚಿಸಿ, ಪೋಸ್ಟ್ ಮಾಡಿದ್ದರು. ಆದರೆ ಅಂಥಹ ಚಿತ್ರಗಳ ಪೈಕಿ, ಬೆಂಗಾಲಿ ಜೋಡಿಯನ್ನು ಕೈಯ್ಯಲ್ಲಿ ಮೀನು ಹಿಡಿದಿರುವಂತೆ ಚಿತ್ರಿಸಿದ್ದರು. ಈ ಫೋಟೋಗೆ ನೆಟ್ಟಿಗರು ಭಾರೀ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಮೀನು ನಮ್ಮ ಸಂಪ್ರದಾಯದ ಒಂದು ಭಾಗವಷ್ಟೇ, ಆದರೆ ಬೆಂಗಾಲಿಗಳಿಗೆ ಅದೇ ಪ್ರಮುಖ ಎನ್ನುವಂತೆ ಬಿಂಬಿಸಲಾಗಿದೆ ಇದು ಸರಿಯಲ್ಲ ಎಂದಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu