ಹುಣ್ಣಿಮೆ ಚಂದ್ರ:
ಹುಣ್ಣಿಮೆ ಚಂದ್ರನನ್ನು ನೋಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕನಸಿನಲ್ಲಿ ಹುಣ್ಣಿಮೆ ಚಂದ್ರನ ದರ್ಶನ ನಿಮ್ಮ ಮನದ ಬಯಕೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂಬುದನ್ನು ಸೂಚಿಸುತ್ತದೆ.  
ಮೋಡಗಳ ನಡುವೆ ಚಂದ್ರ:
ಕನಸಿನಲ್ಲಿ ಮೋಡಗಳ ನಡುವೆ ಚಂದ್ರನನ್ನು ಕಂಡರೆ ನೀವು ನಿಮ್ಮ ಗುರಿಯನ್ನು ಸಾಧಿಸಲು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. 
ಕೆಂಪು ಚಂದ್ರ:
ಕನಸಿನಲ್ಲಿ ಕೆಂಪು ಚಂದ್ರನ ದರ್ಶನವು ನಿಮ್ಮ ಮನಸ್ಥಿತಿಯನ್ನು ಬಿಂಬಿಸುತ್ತದೆ. ಈ ಸಂದರ್ಭದಲ್ಲಿ ವಿವಾದಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀವು ಎಚ್ಚರಿಕೆಯಿಂದ ಇರಬೇಕು.
ಚಂದ್ರ ಇದ್ದಕ್ಕಿದ್ದಂತೆ ಮರೆಯಾಗುವುದು:
ಕನಸಿನಲ್ಲಿ ಚಂದ್ರ ಇದ್ದಕ್ಕಿದ್ದಂತೆ ಮರೆಯಾಗುವುದನ್ನು ಕಾಣುವುದು ತುಂಬಾ ಅಮಂಗಳಕರ. ಇದು ನಿಮ್ಮ ಜೀವನದಲ್ಲಿ ಅತಿ ಶೀಘ್ರದಲ್ಲಿಯೇ ಸಂಕಷ್ಟಗಳು ಎದುರಾಗಬಹುದು ಎಂಬುದರ ಸಂಕೇತವಾಗಿದೆ. 
 
   
 
 
 
 
 
 
 
 
 
 
 
 
 
 
 
