-->

ಸುಕೇಶ್ ಚಂದ್ರಶೇಖರ್ ತನ್ನ ಬದುಕು, ಕೆರಿಯರ್ ಎರಡೂ ಹಾಳು ಮಾಡಿದ: ಜಾಕ್ವಿಲೀನ್ ಫರ್ನಾಂಡೀಸ್ ಅಳಲು

ಸುಕೇಶ್ ಚಂದ್ರಶೇಖರ್ ತನ್ನ ಬದುಕು, ಕೆರಿಯರ್ ಎರಡೂ ಹಾಳು ಮಾಡಿದ: ಜಾಕ್ವಿಲೀನ್ ಫರ್ನಾಂಡೀಸ್ ಅಳಲು


ದೆಹಲಿ: ತನಗೂ ಸುಕೇಶ್‌ ಚಂದ್ರಶೇಖರ್ ಗೂ ಪರಿಚಯವೇ ಇಲ್ಲ ಎಂದು ಹೇಳುತ್ತಿದ್ದ ಬಾಲಿವುಡ್ ನಟಿ ಜಾಕ್ವಿಲೀನ್ ಫರ್ನಾಂಡಿಸ್, ಇದೀಗ ಆತನಿಂದ ತನ್ನ ಬದುಕು ಮತ್ತು ಕೆರಿಯರ್ ಎರಡೂ ಹಾಳಾಯಿತೆಂದು ಅಲವತ್ತುಕೊಂಡಿದ್ದಾರೆ.

ಸುಕೇಶ್ ಚಂದ್ರಶೇಖರ್ ನಿಂದ ಜಾಕ್ ಲೀನ್ ಫರ್ನಾಂಡಿಸ್  ಲಕ್ಷಾಂತರ ರೂ. ಮೌಲ್ಯದ ಉಡುಗೊರೆ ಹಾಗೂ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿರುವ ಜಾಕ್ ಲೀನ್, 'ತನಗೆ ಸುಕೇಶ್ ಚಂದ್ರಶೇಖರ್ ಪರಿಚಯವಾಗಿದ್ದು ಪಿಂಕಿ ಇರಾನಿಯವರಿಂದ. ಗೃಹ ಸಚಿವಾಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಪರಿಚಯ ಮಾಡಿಕೊಟ್ಟಿದ್ದರು. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಸಂಬಂಧಿ ಹಾಗೂ ಅಲ್ಲಿನ ಮಾಧ್ಯಮ ಸಮೂಹ ಸಂಸ್ಥೆಯನ್ನು ನಡೆಸುತ್ತಿರುವುದಾಗಿ ಪರಿಚಯ ಮಾಡಿಕೊಟ್ಟಿದ್ದ. ಆದರೆ ಆತನ ಅಪರಾಧ ಹಿನ್ನೆಲೆಯ ಬಗ್ಗೆ ಆಕೆ ನನಗೆ ಹೇಳಿರಲಿಲ್ಲ' ಎಂದು ಜಾಕ್‌ಲೀನ್ ಹೇಳಿಕೊಂಡಿದ್ದಾರೆ.

ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಸುಕೇಶ್, ಜಾಕ್‌ಲೀನ್ ಅವರನ್ನು ಪರಿಚಯ ಮಾಡಿಕೊಂಡಿದ್ದ. ಸುಕೇಶ್ ದಕ್ಷಿಣದ ಚಿತ್ರರಂಗಗಳಲ್ಲೂ ನೀವು ನಟಿಸಬೇಕು. ನಾನು ಹಲವು ಸಿನಿಮಾಗಳನ್ನು ನಿರ್ಮಿಸುತ್ತಿದ್ದೇನೆ. ನಾವು ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದ. ಒಮ್ಮೆ ನಾನು ಕೇರಳದಲ್ಲಿರುವಾಗ ಪ್ರಯಾಣಕ್ಕಾಗಿ ಸುಕೇಶ್ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದ. ಎರಡು ಬಾರಿ ಚೆನ್ನೈನಲ್ಲಿ ಆತನನ್ನು ಭೇಟಿಯಾದಾಗ ಪ್ರೈವೇಟ್ ಜೆಟ್ ವ್ಯವಸ್ಥೆ ಮಾಡಿದ್ದ' ಎಂದು ಜಾಕ್‌ಲೀನ್ ಹೇಳಿದ್ದಾರೆ.

ಸುಕೇಶ್ ಬಂಧನವಾದ ಮೇಲಷ್ಟೇ ಜಾಕ್‌ಲೀನ್‌ಗೆ ಆತನ ಅಪರಾಧ ಚಟುವಟಿಕೆಗಳ ಬಗ್ಗೆ ಗೊತ್ತಾಯಿತಂತೆ. 'ಆತ ನನ್ನ ದಾರಿ ತಪ್ಪಿಸುವುದರ ಜತೆಗೆ ಜೀವನ, ಕರಿಯರ್ ಎರಡೂ ಹಾಳು ಮಾಡಿದ' ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article