-->
1000938341
ಪ್ರಪಂಚದ ಅತೀ ಹಿರಿಯ ಡಿಸ್ಕೋ ಜಾಕಿ ರೆನಾಲ್ಡೋ ಮಾರಿಯಾ ಕಾರ್ಡೆರೋ ಇನ್ನಿಲ್ಲ

ಪ್ರಪಂಚದ ಅತೀ ಹಿರಿಯ ಡಿಸ್ಕೋ ಜಾಕಿ ರೆನಾಲ್ಡೋ ಮಾರಿಯಾ ಕಾರ್ಡೆರೋ ಇನ್ನಿಲ್ಲ


ಬೀಜಿಂಗ್ : ಪ್ರಪಂಚದ ಅತೀ ಹಿರಿಯ ಡಿಸ್ಕೋ ಜಾಕಿ (ಡಿ.ಜೆ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೆನಾಲ್ಡೋ ಮಾರಿಯಾ ಕಾರ್ಡೆರೋ (98) ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ.

ತಮ್ಮ ಮಧುರವಾದ ಧ್ವನಿ, ಆತ್ಮೀಯ ಭಾವದ ಮಾತುಗಳ ರೇಡಿಯೋ ಕಾರ್ಯಕ್ರಮಗಳ ಮೂಲಕ ಸತತ 72 ವರ್ಷಗಳ ಕಾಲ ಕೇಳುಗರ ಮನ ಮುಟ್ಟಿದ್ದರು. 

ಲೇಟ್‌ ನೈಟ್‌ ಎಂದು ಪ್ರಖ್ಯಾತವಾಗಿರುವ ರೇಡಿಯೋ ಕಾರ್ಯಕ್ರಮದ ಮೂಲಕ ಜನರ ಮನಸೂರೆಗೊಂಡಿರುವ ರೆನಾಲ್ಡೋ ಮಾರಿಯಾ ಕಾರ್ಡೆರೋ ಅವರು ಅಂಕಲ್‌ ರೇ ಎಂದೇ ಪ್ರಖ್ಯಾತರಾಗಿದ್ದರು. 1950ರ ದಶಕದಲ್ಲೇ ತಮ್ಮ ತಡರಾತ್ರಿ ಕಾರ್ಯಕ್ರಮಗಳ ಮೂಲಕ ಜನಪ್ರಿಯ ಗೀತೆಗಳನ್ನು ಜನರಿಗೆ ಪರಿಚಯಿಸಿದ್ದರು. “ದಿ ವಲ್ಡ್ಸ್ ಮೋಸ್ಟ್‌ ಡ್ನೂರಬಲ್‌ ಡಿಜೆ’ ಎನ್ನುವ ಗಿನ್ನೆಸ್‌ ದಾಖಲೆಯನ್ನು ಸೃಷ್ಟಿಸಿದ್ದರು.

Ads on article

Advertise in articles 1

advertising articles 2

Advertise under the article