-->
ಕಾಸರಗೋಡು: ಆನ್ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡಿ ಸೇವಿಸಿದ ವಿದ್ಯಾರ್ಥಿನಿ ಮೃತ್ಯು; ಹೊಟೇಲ್ ಪರವಾನಿಗೆ ರದ್ದು

ಕಾಸರಗೋಡು: ಆನ್ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡಿ ಸೇವಿಸಿದ ವಿದ್ಯಾರ್ಥಿನಿ ಮೃತ್ಯು; ಹೊಟೇಲ್ ಪರವಾನಿಗೆ ರದ್ದುಕಾಸರಗೋಡು: ಆನ್ಲೈನ್‌ ನಲ್ಲಿ ಬಿರಿಯಾನಿ ಆರ್ಡರ್ ಮಾಡಿರುವ ಬಿರಿಯಾನಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಕಾಸರಗೋಡು ಸಮೀಪದ ಪೆರುಂಬಳದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


ಬೇನೂರು ತಲಕ್ಲಾಯಿ ನಿವಾಸಿ, ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ (20) ಮೃತಪಟ್ಟವರು.

ಡಿ.31ರಂದು ಅಂಜುಶ್ರೀ ಸ್ಥಳೀಯ ರೆಸ್ಟೋರೆಂಟ್‌ ನಿಂದ ಕುಝಿಮಂತಿ ಬಿರಿಯಾನಿ( ಕೇರಳದಲ್ಲಿ ಜನಪ್ರಿಯ ಬಿರಿಯಾನಿ)ಯನ್ನು ಆನ್ಲೈನ್‌ ಮೂಲಕ ಆರ್ಡರ್ ಮಾಡಿ ಸೇವಿಸಿದ್ದರು. ಆದರೆ ಆ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಮುಂಜಾನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಮೃತಳ ಪೋಷಕರು ದೂರು ನೀಡಿದ್ದಾರೆ. ಫುಡ್‌ ಪಾಯಿಸನ್‌ ನಿಂದ ಆಕೆ ಮೃತಪಟ್ಟಿದ್ದಾರೆಂದು ಆಗಿರಬಹುದೆಂದು ಶಂಕಿಸಲಾಗಿದೆ.

ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಆಹಾರ ವಿಷದ ಆರೋಪ ಹೊತ್ತಿರುವ ಹೋಟೆಲ್‌ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಟೇಲ್ ಮಾಲಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article