-->
ಬೆಳ್ತಂಗಡಿ: ಮನೆಯೊಂದರ ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ಬೆಳ್ತಂಗಡಿ: ಮನೆಯೊಂದರ ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು


ಬೆಳ್ತಂಗಡಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ದಾರಿ ಮನೆಯೊಂದರ ಶೌಚಾಲಯಕ್ಕೆ ತೆರಳಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶನಿವಾರ ಗೇರುಕಟ್ಟೆ ಎಂಬಲ್ಲಿ ಸಂಭವಿಸಿದೆ.

ಬೆಳ್ತಂಗಡಿಯ ಕುಪ್ಪೆಟ್ಟಿ ನಿವಾಸಿ ಅಬ್ದುರಝಾಕ್ ಎಂಬವರ ಪುತ್ರಿ ಆಸಿಫಾ(16) ಮೃತಪಟ್ಟ ಬಾಲಕಿ. 

ಗೇರುಕಟ್ಟೆಯ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆಸಿಫಾ ಗೇರುಕಟ್ಟೆ ಬಸ್ ತಂಗುದಾಣದಲ್ಲಿ ಬಸ್ ಇಳಿದು ಶಾಲೆಗೆಂದು ತೆರಳುತ್ತಿದ್ದಳು. ಈ ವೇಳೆ ಆಸಿಫಾ ಅಲ್ಲಿಯೇ ಸಮೀಪವಿರುವ ಕಳಿಯಾ ಗ್ರಾಮದ ಐಮನ್‌ ಆರ್ಕೆಡ್‌ನ‌ಲ್ಲಿರುವ ಹಸೈನಾರ್‌ ಅವರ ಮನೆಯ ಶೌಚಾಲಯದ ಒಳಗೆ ತೆರಳಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ಶೌಚಾಲಯಕ್ಕೆ ಹೋದವಳು ಹೊರಬರಲೇ ಇಲ್ಲ ಎನ್ನಲಾಗಿದೆ. 

ಮನೆಯವರು ಹೊರಗಿನಿಂದ ಎಷ್ಟು ಕರೆದರೂ ಯಾವುದೇ ಪ್ರತಿಕ್ರಿಯೆ ಇಲ್ಲದ ಹಿನ್ನಲೆಯಲ್ಲಿ ಅವರು ಶಾಲೆಯವರಿಗೆ, ಸ್ಥಳೀಯ ಗ್ರಾಪಂ ಸದಸ್ಯ ಅಬ್ದುಲ್ ಕರೀಂ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶೌಚಾಲಯದ ಬಾಗಿಲು ಮುರಿದು ನೋಡಿದಾಗ ವಿದ್ಯಾರ್ಥಿನಿ ನರಳಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆಕೆಯನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.

Ads on article

Advertise in articles 1

advertising articles 2

Advertise under the article