-->
ದೈಹಿಕ ಸಂಪರ್ಕ ಒಲ್ಲೆಯೆಂದ ಯುವತಿಯ ಖಾಸಗಿ ಫೋಟೋ, ವೀಡಿಯೋ ವೈರಲ್ ಮಾಡಿದ ಆರೋಪಿ ಅರೆಸ್ಟ್

ದೈಹಿಕ ಸಂಪರ್ಕ ಒಲ್ಲೆಯೆಂದ ಯುವತಿಯ ಖಾಸಗಿ ಫೋಟೋ, ವೀಡಿಯೋ ವೈರಲ್ ಮಾಡಿದ ಆರೋಪಿ ಅರೆಸ್ಟ್


ಬೆಂಗಳೂರು: ಪರಿಚಿತ ಯುವತಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಲ್ಲದೆ ಆಕೆಯ ಖಾಸಗಿ ಫೋಟೋ, ವೀಡಿಯೋಗಳನ್ನು ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶಾನ್ಯ ಸೆನ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಆರೋಪಿ ಸಮರ್ ಪರಿಮಣಿಕ ಬಂಧಿತ ಆರೋಪಿ. ಈತನನ್ನು ಬೆಂಗಳೂರಿನ ಹಲಸೂರಿನ ಬಾಡಿಗೆ ಮನೆಯಿಂದ ಬಂಧಿಸಲಾಗಿದೆ. ಆರೋಪಿಯು ಮಹಿಳೆಯ ಖಾಸಗಿ ವೀಡಿಯೋ ತೋರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಅಲ್ಲದೆ ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ. ಸಮರ್ ಪರಿಮಣಿಕನ ಒತ್ತಡಕ್ಕೆ ಯುವತಿ ಮಣಿಯದಿದ್ದಾಗ ಆಕೆಯ ಖಾಸಗಿ ವೀಡಿಯೋ ವೈರಲ್​ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಿಗೇಹಳ್ಳಿಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೋರ್ಸ್ ಕಲಿಯಲು ಬಂದಿದ್ದ ಯುವತಿಗೆ ಬ್ಯೂಟಿ ಪಾರ್ಲರ್​ಗೆ ಗ್ರಾಹಕನಾಗಿ ಬಂದಿದ್ದ ಆರೋಪಿ ಸಮರ್  ಪರಿಚಿತನಾಗಿದ್ದ. ಇವರಿಬ್ಬರ ನಡುವೆ ಒಂದೂವರೆ ವರ್ಷದ ಪರಿಚಯ ಸ್ನೇಹವಾಗಿತ್ತು. ಇದಾದ ಬಳಿಕ ಸಲುಗೆ ಬೆಳೆಸಿಕೊಂಡ ಆತ ಆಕೆಯ ಖಾಸಗಿ ಫೋಟೋ, ವೀಡಿಯೋವನ್ನು ಸಂಗ್ರಹಿಸಿದ್ದಾನೆ. ಅಲ್ಲದೆ ಹೆಚ್ಚಿನ ಹಣ ಸಂಪಾದನೆಯ ಆಮಿಷವೊಡ್ಡಿ ಡ್ಯಾನ್ಸ್​ ಬಾರ್​ಗೂ ಸೇರಿಸಿದ್ದ. ಆದರೆ ಸಮರ್​ ಕಿರುಕುಳ ಸಹಿಸಲಾಗದೆ ಪಶ್ಚಿಮ ಬಂಗಾಳಕ್ಕೆ ಯುವತಿ ತೆರಳಿದ್ದಾಳೆ. 

ಅಲ್ಲಿಗೆ ಹೋದ ಯುವತಿ ಅಲ್ಲಿಯೇ ಓರ್ವ ಯುವಕನೊಂದಿಗೆ ವಿವಾಹವಾಗಿದ್ದಾಳೆ. 6 ತಿಂಗಳ ಹಿಂದೆ ಮತ್ತೆ ಬೆಂಗಳೂರಿಗೆ ಬಂದು ಪತಿಯೊಂದಿಗೆ ವಾಸವಾಗಿದ್ದಳು. ಆಕೆ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಮತ್ತೆ ಆರೋಪಿ ಸಮರ್ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದ್ದಾನೆ. ಯಾವುದಕ್ಕೂ ಬಗ್ಗದಿದ್ದಾಗ ಆಕೆಯ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್​ಮೇಲ್​ ಮಾಡಿದ್ದಾನೆ. ಹಣ ನೀಡಲು, ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಆಕೆಯ ಖಾಸಗಿ ವಿಡಿಯೋವನ್ನು ವೈರಲ್​ ಮಾಡಿದ್ದಾನೆ. ಈ ವಿಚಾರ ತಿಳಿದ ಯುವತಿ ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಆರೋಪಿ ಸಮರ್ ಪರಿಮಣಿಕನನ್ನು ಸಿಇಎನ್​ ಠಾಣೆ ಪೊಲೀಸರು ಬಂಧಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article