-->

ಕೋವಿಡ್ ಸೋಂಕಿಗೆ 'ರಮ್' ಮದ್ದು ಎಂದಿದ್ದ ಉಳ್ಳಾಲ ನಗರಸಭಾ ಸದಸ್ಯ: ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದ ಕಾಂಗ್ರೆಸ್

ಕೋವಿಡ್ ಸೋಂಕಿಗೆ 'ರಮ್' ಮದ್ದು ಎಂದಿದ್ದ ಉಳ್ಳಾಲ ನಗರಸಭಾ ಸದಸ್ಯ: ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದ ಕಾಂಗ್ರೆಸ್

ಉಳ್ಳಾಲ: ಕೋವಿಡ್ ಸೋಂಕಿಗೆ 'ರಮ್' ಮದ್ದು ಎಂದಿದ್ದ ಉಳ್ಳಾಲ ನಗರಸಭೆಯ ಸದಸ್ಯ ರವೀಂದ್ರ ಗಟ್ಟಿಯವರನ್ನು ಕಾಂಗ್ರೆಸ್ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.

'ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದಲ್ಲಿ ಕೋವಿಡ್ ನಿವಾರಣೆ' ಎಂದು ರವೀಂದ್ರ ಗಟ್ಟಿಯವರು ಹೇಳಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಉಳ್ಳಾಲ ನಗರಸಭೆಯ ಸದಸ್ಯ ರವೀಂದ್ರ ಗಟ್ಟಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಪಾನಮತ್ತರಾಗಿ ಮೈಮೇಲಿನ ಬಟ್ಟೆಗಳನ್ನು ಕಳಚಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದುಕೊಂಡಿರುತ್ತಾರೆ‌. ಅಲ್ಲದೆ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಾರೆ. ಈಚೆಗೆ ಪಕ್ಷದ ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಆದ್ದರಿಂದ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ಆದೇಶ ಹೊರಡಿಸಿ ತಿಳಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article