-->
ಲಾಡ್ಜ್ ನಲ್ಲಿ ಅಣ್ಣ-ತಂಗಿ ಆತ್ಮಹತ್ಯೆ: ಕಾರಣ ಕೇಳಿದರೆ ಯಾರನ್ನಾದರೂ ದಂಗು ಬಡಿಸುತ್ತದೆ‌...!

ಲಾಡ್ಜ್ ನಲ್ಲಿ ಅಣ್ಣ-ತಂಗಿ ಆತ್ಮಹತ್ಯೆ: ಕಾರಣ ಕೇಳಿದರೆ ಯಾರನ್ನಾದರೂ ದಂಗು ಬಡಿಸುತ್ತದೆ‌...!

ಧಾರವಾಡ:  ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಯುವಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ನವಲಗುಂದ ಪಟ್ಟಣದಲ್ಲಿ ನಡೆದಿದೆ. ಸಂಬಂಧದಲ್ಲಿ ಅಣ್ಣ - ತಂಗಿಯರಾಗಿದ್ದ ಇವರು ಈ ರೀತಿಯಲ್ಲಿ ಆತ್ಮಹತ್ಯೆ ಮಾಡಿರುವ ಕಾರಣ ಕೇಳಿದರೆ ಯಾರನ್ನಾದರೂ ದಂಗು ಬಡಿಸುತ್ತದೆ‌.

ನವಲಗುಂದ ತಾಲೂಕು ಬೆಳವಟಗಿ ಗ್ರಾಮದ ನಿವಾಸಿ ಕುಮಾರ ತಳವಾರ (22) ಹಾಗೂ ಧಾರವಾಡ ತಾಲೂಕು ನೀರಲಕಟ್ಟಿ ಗ್ರಾಮದ ದೀಪಾ ಎತ್ತಿನಗುಡ್ಡ (18) ಆತ್ಮಹತ್ಯೆ ಮಾಡಿಕೊಂಡ ಜೋಡಿ. ಇವರಿಬ್ಬರೂ ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಕಳೆದ ಮೂರು ದಿನಗಳಿಂದ ಲಾಡ್ಜ್‌ನಲ್ಲಿ ತಂಗಿದ್ದರು. ತಮ್ಮ ಸ್ನೇಹಿತರ ಮೂಲಕ ಕುಮಾರ ತಳವಾರ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನವಲಗುಂದ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ಜೋಡಿ ಸಂಬಂಧದಲ್ಲಿ ಅಣ್ಣ-ತಂಗಿಯರಾಗಿದ್ದರು‌. ಇಬ್ಬರೂ ಅಕ್ಕ-ತಂಗಿಯರ ಮಕ್ಕಳಾಗಿದ್ದರು. ದೀಪಾಳನ್ನು ಕಾಣಲೆಂದು ಕುಮಾರ ಆಗಾಗ ಆಕೆಯ ಈರಾದ ನೀರಲಕಟ್ಟಿ ಗ್ರಾಮಕ್ಕೆ ಬರುತ್ತಿದ್ದ. ಅಣ್ಣ-ತಂಗಿಯರಾಗಿದ್ದ ಕಾರಣ ಇಬ್ಬರ ಬಗ್ಗೆ ಯಾರಿಗೂ ಸಂಶಯವಿರಲಿಲ್ಲ. ಆದರೆ, ಕುಮಾರ ತಳವಾರ ತನ್ನ ತಂಗಿಯನ್ನೇ ಪ್ರೀತಿಸಲಾರಂಭಿಸಿದ್ದ. ಕಳೆದ ಎರಡು ದಿನಗಳ ಹಿಂದೆ ಕಾಲೇಜಿಗೆ ಹೋಗಿದ್ದ ದೀಪಾ, ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಳು. ಅಣ್ಣ-ತಂಗಿ ಇಬ್ಬರೂ ಎಲ್ಲೋ ಹೋಗಿರಬಹುದೆಂದು ಕುಟುಂಬಸ್ಥರು ಸುಮ್ಮನಾಗಿದ್ದರು.

ಇವರಿಬ್ಬರೂ ಕಳೆದ ಎರಡು ದಿನಗಳಿಂದ ನವಲಗುಂದ ಲಾಡ್ಜ್‌ನಲ್ಲೇ ಇದ್ದರು. ಆತ್ಮಹತ್ಯೆ ಮಾಡಿಕೊಂಡ ರೂಮ್‌ನಲ್ಲಿ ಇಬ್ಬರ ಬಟ್ಟೆಗಳಿದ್ದ ಬ್ಯಾಗ್ ಇತ್ತು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಪಶ್ಚಾತ್ತಾಪ ಪಟ್ಟು ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article