-->

ಧನಾಗಮನವನ್ನು ಹೆಚ್ಚಿಸಲು ಕೊತ್ತಂಬರಿ ಬೀಜದ ಈ ಪರಿಹಾರವನ್ನು ಅನುಸರಿಸಿ..!!

ಧನಾಗಮನವನ್ನು ಹೆಚ್ಚಿಸಲು ಕೊತ್ತಂಬರಿ ಬೀಜದ ಈ ಪರಿಹಾರವನ್ನು ಅನುಸರಿಸಿ..!!ಶುಕ್ರವಾರದಂದು ನಿಮಗೆ ಬರಬೇಕಿದ್ದ ಹಣ ಯಾರಿಂದ  ಬರಬೇಕಾಗಿದೆಯೋ ಅವರ ಹೆಸರನ್ನು ಕಾಗದದ ಮೇಲೆ ಬರೆದು, ಅದರಲ್ಲಿ ಒಣ ಕೊತ್ತಂಬರಿ ಬೀಜಗಳನ್ನು ಹಾಕಿ ಅದನ್ನು ಹರಿಯುವ ನೀರಿನಲ್ಲಿ ಬಿಡಿ. ಇದರಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮ ಬಳಿ ಮರಳುತ್ತದೆ.  


ಧನಾಗಮನವನ್ನು ಹೆಚ್ಚಿಸಲು, ಯಾವುದೇ ತಿಂಗಳ ಶುಕ್ಲ ಪಕ್ಷದಂದು ಒಣ ಕೊತ್ತಂಬರಿ ಬೀಜಗಳನ್ನು ಮಣ್ಣಿನ ಪಾತ್ರೆಯಲ್ಲಿ ಇರಿಸಿ. ಅದರಲ್ಲಿ ಕೆಲವು ನಾಣ್ಯಗಳನ್ನು ಹಾಕಿ ಉತ್ತರ ದಿಕ್ಕಿನಲ್ಲಿಡಿ. ಮಡಕೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಲು ಪ್ರಾರಂಭಿಸಿದಾಗ, ಅದರಲ್ಲಿ ಇರಿಸಲಾದ ನಾಣ್ಯಗಳನ್ನು ಹೊರತೆಗೆದು ಅದನ್ನು ತಿಜೋರಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗತೊಡಗುತ್ತದೆ.  


ಮನೆಯಲ್ಲಿ ಆಗಾಗ ಮನಸ್ತಾಪ ಉಂಟಾಗಿ ಕುಟುಂಬ ಸದಸ್ಯರಲ್ಲಿ ಯಾವಾಗಲು ವೈಮನಸ್ಯದ ವಾತಾವರಣವಿದ್ದರೆ, ಸ್ವಲ್ಪ ಒಣ ಕೊತ್ತಂಬರಿ ಬೀಜಗಳನ್ನು ಮನೆಯ ಪೂರ್ವ ದಿಕ್ಕಿಗೆ ಇಡಿ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಹಾಗೂ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.  Ads on article

Advertise in articles 1

advertising articles 2

Advertise under the article