ನಿಮ್ಮ ಅಂಗೈಯಲ್ಲಿ ಇಂತಹ ರೇಖೆಗಳು ಇವೆಯಾ..?ಹಾಗಾದರೆ ಅದು ಈ ಎಲ್ಲಾ ತೊಂದರೆಗಳನ್ನು ಉಂಟುಮಾಡುತ್ತದೆ..!


ಅಂಗೈಯಲ್ಲಿ ಅನೇಕ ಸಣ್ಣ ಗೆರೆಗಳಿದ್ದರೆ ಮತ್ತು ಈ ರೇಖೆಗಳು ಜೀವನದ ರೇಖೆಯನ್ನು ದಾಟಿದರೆ, ಅದನ್ನು ಮಂಗಳಕರವೆಂದು ಕರೆಯಲಾಗುವುದಿಲ್ಲ. ಅಂತಹ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಕಷ್ಟವನ್ನೇ ಎದುರಿಸಬೇಕಾಗುತ್ತದೆ. 

ಕಿರು ಬೆರಳಿನ ಮೇಲೆ ಅನೇಕ ಅಡ್ಡ ರೇಖೆಗಳಿದ್ದರೆ, ಅವುಗಳನ್ನು ಸಹ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ರೇಖೆಗಳು ವ್ಯಕ್ತಿಯ ಜೀವನದಲ್ಲಿ ದುರಾದೃಷ್ಟವನ್ನು ತರುತ್ತದೆ. 

-ಇನ್ನು ಯಾರ ಕೈಯ್ಯಲ್ಲಿ ಕಪ್ಪು ಚುಕ್ಕೆಗಳಿರುತ್ತವೆಯೋ ಅವರು ಜೀವನದಲ್ಲಿ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಕಪ್ಪು ಚುಕ್ಕೆಗಳಿರುವುದನ್ನು ಅಶುಭ ಎಂದು ಹೇಳಲಾಗುತ್ತದೆ. 

ಕೈಯಲ್ಲಿ ದ್ವೀಪದ ಗುರುತು ಇರುವುದು ಸಾಮಾನ್ಯವಾಗಿ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ದ್ವೀಪದ ಚಿಹ್ನೆಯು ಹಸ್ತದಲ್ಲಿರುವ ಶುಭ ರೇಖೆಯ ಶುಭ ಫಲವನ್ನು ಕೂಡಾ ಕಡಿಮೆ ಮಾಡುತ್ತದೆ.