-->
ದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಹತ್ಯೆ: ಪತ್ನಿಗೆ ಕರೆಂಟ್ ಶಾಕ್ ನೀಡಿ ಬೆಡ್ ರೂಂನಲ್ಲೇ ಹೂತು ಹಾಕಿದ ಕಿರಾತಕ ಪತಿ

ದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಹತ್ಯೆ: ಪತ್ನಿಗೆ ಕರೆಂಟ್ ಶಾಕ್ ನೀಡಿ ಬೆಡ್ ರೂಂನಲ್ಲೇ ಹೂತು ಹಾಕಿದ ಕಿರಾತಕ ಪತಿ


ಉತ್ತರಪ್ರದೇಶ: ಮುಸ್ಲಿಂ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಹಿಂದೂ ಹುಡುಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಓಡಿ ಹೋಗಿ ಮದುವೆಯಾಗಿದ್ದಳು. ಇದೀಗ ಮತಾಂತರಗೊಂಡು ಅಕ್ಷಾ ಫಾತ್ಮಾ ಬೇಗಂ‌ ಆಗಿದ್ದ ಉಮಾ ಶರ್ಮಾಳನ್ನು ಆಕೆಯ ಪತಿ ವಾಸಿಂ ಅಹ್ಮದ್ ಕೊಲೆಗೈದು, ಮೃತದೇಹವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿದ್ದಾನೆ. ಇದೀಗ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಮಾ ಶರ್ಮಾ ಹಾಗೂ ವಾಸಿಂ ಅಹ್ಮದ್ ಮದುವೆಯಾಗಿ ಏಳು ವರ್ಷಗಳೇ ಕಳೆದಿತ್ತು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಈ ನಡುವೆ ದಂಪತಿ ಮಧ್ಯೆ ಮನಸ್ತಾಪ ಉಂಟಾಗಿ ನಿತ್ಯವೂ ಜಗಳವಾಗುತ್ತಿತ್ತು. ಇದೇ ಕೋಪದಲ್ಲಿ ಗಂಡ ವಾಸಿಂ ಅಹ್ಮದ್, ಪತ್ನಿ ಉಮಾ ಶರ್ಮಾಳಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಮೃತದೇಹವವನ್ನು ಹೂತು ಹಾಕಿದ್ದಾನೆ.

ಘಟನೆ ನಡೆದ ವೇಳೆ ವಾಸಿಂ ಅಹ್ಮದ್ ತಾಯಿ ಆಶಿಯಾ ಬೇಗಂ ಊರಿನಲ್ಲಿ ಇರಲಿಲ್ಲ. ಘಟನೆ ನಡೆದ ಎರಡು ದಿನಗಳ ಬಳಿಕ ಮನೆಗೆ ಬಂದ ಆಕೆ ಮನೆಗೆ ಬಂದಿದ್ದ ಆಶಿಯಾ ಸೊಸೆಯ ಬಗ್ಗೆ ವಿಚಾರಿಸಿದ್ದಾಳೆ. ಆಗ ವಾಸಿಂ ಪತ್ನಿ ಹೊರಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾನೆ. ಆದಾಗಿಯೂ ಸೊಸೆ ಕಾಣದಿದ್ದಾಗ ಅತ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ತಕ್ಷಣ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಮನೆಯ ಕೋನೆಯ ನೆಲದಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಅನುಮಾನದ ಮೇಲೆ, ನೆಲವನ್ನು ಅಗೆದು ನೋಡಿದಾಗ ಉಮಾ ಶರ್ಮಾಳ ಮೃತದೇಹ ಹೂತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಆರೋಪಿ ವಾಸಿಂ ಅಹ್ಮದ್‌ನನ್ನು ಬಂಧಿಸಿರುವ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article