ಮಂಗಳೂರು: ಯುವತಿ ನಾಪತ್ತೆ


ಮಂಗಳೂರು: ನಗರದ ಪಾಂಡೇಶ್ವರ ಠಾಣಾ ವ್ಯಾಪ್ತಿಯ ನಿವಾಸಿ ಯುವತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

 ಶ್ಯಾರಿಲ್ ಟ್ರಿನಿಟಾ ಮಾರ್ಕ್ (19) ನಾಪತ್ತೆಯಾದ ಯುವತಿ.

ಈಕೆ ಮನೆಯಲ್ಲಿ ಯಾರಿಗೂ ಹೇಳದೆ ಹೊರಗಡೆ ಹೋಗಿದ್ದಾರೆ. ಆ ಬಳಿಕ ಆಕೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. 

ನಾಪತ್ತೆಯಾಗಿರುವ ಶ್ಯಾರಿಲ್ ಟ್ರಿನಿಟಾ ಮಾರ್ಕ್ 5 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದಾರೆ. ಕನ್ನಡ, ತುಳು, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಬಲ್ಲವರಾಗಿರುವ ಇವರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu