-->
ಟ್ಯಾಂಕ್ ಮೇಲೆ ಕುಳ್ಳಿರಿಸಿ ಪ್ರೇಯಸಿಯನ್ನು ತಬ್ಬಿ ಬೈಕ್ ರೈಡ್ ಮಾಡಿದ ಪ್ರೇಮಿ: ಜೋಡಿಗೆ ಎದುರಾಯ್ತು ಸಂಕಷ್ಟ

ಟ್ಯಾಂಕ್ ಮೇಲೆ ಕುಳ್ಳಿರಿಸಿ ಪ್ರೇಯಸಿಯನ್ನು ತಬ್ಬಿ ಬೈಕ್ ರೈಡ್ ಮಾಡಿದ ಪ್ರೇಮಿ: ಜೋಡಿಗೆ ಎದುರಾಯ್ತು ಸಂಕಷ್ಟ


ವಿಶಾಖಪಟ್ಟಣಂ: ಬೈಕ್ ನಲ್ಲಿ ಸಂಚರಿಸುತ್ತಿದ್ದ ಪ್ರೇಮಿಯೊಬ್ಬ ಪ್ರೇಯಸಿಯನ್ನು ಟ್ಯಾಂಕ್ ನಲ್ಲಿ ಕುಲ್ಲಿರಿಸಿಕೊಂಡು ತಬ್ಬಿಕೊಂಡು ರೈಡ್ ಮಾಡಿದ್ದ ಪರಿಣಾಮ ಪ್ರೇಮಜೋಡಿಗೆ ಸಂಕಷ್ಟ ಎದುರಾಗಿದೆ. 

ಕೆ ಶೈಲಜಾ (19), ಅಜಯ್ ಕುಮಾರ್ (22) ಅಸಭ್ಯವಾಗಿ ವರ್ತಿಸಿ ವಾಹನ ಚಾಲನಾ ಕಾನೂನು ಉಲ್ಲಂಘಿಸಿದ ಜೋಡಿ.

ಯುವತಿ ಚಲಿಸುತ್ತಿದ್ದ ಬೈಕ್‌ನ ಫ್ಯುಯೆಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಬಾಯ್‌ಫ್ರೆಂಡ್‌ನ ತಬ್ಬಿಕೊಂಡಿದ್ದಳು. ಇದನ್ನು ಯಾರೋ ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ವೀಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ದೂರು ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ನಿರ್ಲಕ್ಷ್ಯದ ಚಾಲನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಸ್ಟೀಲ್ ಪ್ಲಾಂಟ್ ಪೊಲೀಸರು, ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಸೆಕ್ಷನ್ 336, 279, 132 ಮತ್ತು 129 ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೆದ್ದಾರಿಯಲ್ಲಿ ನಿರ್ಲಕ್ಷ್ಯದಿಂದ ವಾನಹ ಚಾಲನೆ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸಿ.ಎಚ್.ಶ್ರೀಕಾಂತ್ 'ನಾಗರಿಕರು ಮತ್ತು ಅವರ ಕುಟುಂಬದವರು ಸಂಚಾರ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ವಾಹನಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ಕಠಿಣ ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article