-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 ಸಾಹಿತಿ ಉಗ್ಗಪ್ಪ ಪೂಜಾರಿಯವರಿಗೆ ಗೌರವ ಸನ್ಮಾನ

ಸಾಹಿತಿ ಉಗ್ಗಪ್ಪ ಪೂಜಾರಿಯವರಿಗೆ ಗೌರವ ಸನ್ಮಾನ




ಮೂಡುಬಿದಿರೆ: ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಗೌರವ ಸಲ್ಲಿಸಿ ಸನ್ಮಾನಿಸುವುದು ಗೌರವ ಸಲ್ಲಿಸಿದವರಿಗೇ ಸನ್ಮಾನಿಸಿದಂತೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಅಭಿಪ್ರಾಯಪಟ್ಟರು

ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ `ಮನೆಯಂಗಳದಲ್ಲಿ ರಾಜ್ಯೋತ್ಸವ' ಮತ್ತು `ಎಲೆಮರೆ ಕಾಯಿಯಂತಿರುವ ನುಡಿ ಪ್ರಚಾರಕರ ಗೌರವ ಸನ್ಮಾನ' ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮೂಡುಬಿದಿರೆಯ ಉಗ್ಗಪ್ಪ ಪೂಜಾರಿಯವರಿಗೆ ಸನ್ಮಾನಿಸಿ ಮಾತನಾಡಿದ ಇವರು ಪುಸ್ತಕವನ್ನು ತಲೆಮೇಲೆ ಹೊತ್ತು ಮನೆ ಮನೆಗೆ ಹಂಚಿ ಕನ್ನಡ ಕುಲಪುರೋಹಿತ ಎಂದೇ ಖ್ಯಾತಿ ಪಡೆದ ಆಲೂರು ವೆಂಕಟರಾಯರAತೆ ಉಗ್ಗಪ್ಪ ಪೂಜಾರಿ ತಮ್ಮ ಸ್ವಯಂ ಪ್ರಕಾಶನದ ಮೂಲಕ ಪುಸ್ತಕ ಪ್ರೇಮವನ್ನು ಬೆಳೆಸುತ್ತಿದ್ದಾರೆ. 6 ನೇ ತರಗತಿ ಮಾತ್ರ ಕಲಿತರು ತಮ್ಮ 55 ನೇ ವರ್ಷದಲ್ಲಿ ತಮ್ಮ ಸ್ವ ಪ್ರಯತ್ನದ ಮೂಲಕ ಸಾಹಿತ್ಯ ಕೃಷಿ ಮಾಡಿದ ಇವರು ಯುವಕರಿಗೆ ಮಾದರಿ ಎಂದರು.

ಕ. ಸಾ. ಪ ತಾಲೂಕು ಘಟಕದ ಕಾರ್ಯಕಾರಿ ಸದಸ್ಯ ಶಿಕಾರಿಪುರ ಈಶ್ವರ್ ಭಟ್ ಮಾತನಾಡಿ 50,000 ಪ್ರತಿಗಳನ್ನು ಮಾರಾಟ ಮಾಡುವುದು ಸಾಧಾರಣ ವಿಷಯವಲ್ಲ ಬದಲಾಗಿ ಬಹಳ ದೊಡ್ಡ ಕೆಲಸ ಶಾಲೆಗಳಿಗೆ ತೆರಳಿ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿದ ಇವರು ನಿಜಕ್ಕೂ ಸಾಧಕ ಎಂದರು. 

ವೇದಿಕೆಯಲ್ಲಿ ಕ. ಸಾ. ಪ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ, ಸದಸ್ಯರಾದ ರಾಮಕೃಷ್ಣ ಶಿರೂರು ಉಪಸ್ಥಿತರಿದ್ದರು. ಶಿಕಾರಿಪುರ ಈಶ್ವರ್ ಭಟ್ ಸ್ವಾಗತಿಸಿದರು, ವೇಣುಗೋಪಾಲ ಶೆಟ್ಟಿ ವಂದಿಸಿದರು.  


ಸಾಹಿತಿಗಳಾದ ಮೂಡುಬಿದಿರೆ ಉಗ್ಗಪ್ಪ ಪೂಜಾರಿಯವರು ತಮ್ಮ 55 ನೇ ವಯಸ್ಸಿನಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಇದುವರೆಗೆ 13 ಪುಸ್ತಕವನ್ನು ತಮ್ಮ ಸ್ವಯಂ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ, ಇದರಲ್ಲಿ 11 ತುಳು ಪುಸ್ತಕ 2 ಕನ್ನಡ ಪುಸ್ತಕ ಒಳಗೊಂಡಿದೆ. ಗಾದೆ, ಒಗಟು, ಸಣ್ಣ ಕಥೆಗಳನ್ನು ₹10 ರಂತೆ 5,000 ಪುಸ್ತಕವನ್ನು ಶಾಲೆಯ ಮಕ್ಕಳಿಗೆ ಕೊಟ್ಟು ಶಾಲಾ ಮಕ್ಕಳಲ್ಲಿ ಪುಸ್ತಕ ಪ್ರೇಮವನ್ನು ಬೆಳೆಸಿದ್ದಾರೆ. 


Ads on article

Advertise in articles 1

advertising articles 2

Advertise under the article

ಸುರ