-->
Kadaba :- ಲೋಕೊಪೈಲೆಟ್ ಸಮಯಪ್ರಜ್ಞೆ.. ತಪ್ಪಿದ ಭಾರೀ ದುರಂತ..!

Kadaba :- ಲೋಕೊಪೈಲೆಟ್ ಸಮಯಪ್ರಜ್ಞೆ.. ತಪ್ಪಿದ ಭಾರೀ ದುರಂತ..!

ಕಡಬ

ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡ ಮತ್ತು ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ ಘಟನೆ ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ಡಿ.31 ನಸುಕಿನ ಜಾವ ನಡೆದಿದೆ.

ಬೆಳ್ತಂಗಡಿ, ಮಂಗಳೂರು, ಪುತ್ತೂರು, ಸುಳ್ಯ ಅಗ್ನಿಶಾಮಕ ದಳ ಮತ್ತು ರೈಲ್ವೇ ಇಲಾಖೆಯ ಸಹಕಾರದೊಂದಿಗೆ ಅನಿಲ ಸೋರಿಕೆಯನ್ನು ತಡೆಯುವ ಕಾರ್ಯಚರಣೆ ನಡೆದಿದೆ. ಮಂಗಳೂರಿನಿಂದ ಮಹರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ರೈಲು ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ರಾತ್ರಿ ಗಂಟೆ 2.30ರ ಸುಮಾರಿಗೆ ಕ್ರಾಸಿಂಗ್‌ಗಾಗಿ ನಿಲ್ಲಿಸಿ ಪೈಲೆಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ಪ್ಯಾನೆಲ್‌ಗಳ ಪೈಕಿ ನಾಲ್ಕನೇ ಟ್ಯಾಂಕ್‌ನಿಂದ ಅನಿಲ ಸೋರಿಕೆ ಬೆಳಕಿಗೆ ಬಂದಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ರೈಲ್ವೇ ನಿಲ್ದಾಣದಿಂದ ಪುತ್ತೂರು ಅಗ್ನಿಶಾಮಕ ದಳಕ್ಕೆ ಬಂದ ಕರೆಯಂತೆ ರಾತ್ರೋ ರಾತ್ರಿ ನೆಟ್ಟಣಕ್ಕೆ ತೆರಳಿದ ಕಾರ್ಯಾಚರಣೆ ನಡೆಸಿದರು. ಅನಿಲ ಸೋರಿಕೆಯಿಂದ ಅನಾಹುತ ತಡೆಯಲು ಮಂಗಳೂರು, ಬೆಳ್ತಂಗಡಿ,ಸುಳ್ಯದಿಂದಲೂ ಹೆಚ್ಚುವರಿ ವಾಹನಗಳನ್ನು ತರಿಸಲಾಯಿತು. ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಅವರ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ಪಿ.ಆನಂದ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬ್ಬಂದಿಗಳಾದ ಮಂಜುನಾಥ್, ಗೃಹ ರಕ್ಷಕ ದಳದ ಮಂಜುನಾಥ್ ಸಹಿತ ಬೆಳ್ತಂಗಡಿ,ಸುಳ್ಯದ ಅಗ್ನಶಾಮಕದಳದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article