ವೃಶ್ಚಿಕ, ಮಿಥುನ, ವೃಷಭ, ಕುಂಭ ರಾಶಿಯವರು ಅಪ್ಪಿತಪ್ಪಿಯೂ ಚಿನ್ನವನ್ನು ಧರಿಸಬಾರದು ಎಂದು ಶಾಸ್ತ್ರ ಹೇಳುತ್ತದೆ.
ತುಲಾ ಮತ್ತು ಮಕರ ರಾಶಿಯ ಜನರು ಕಡಿಮೆ ಪ್ರಮಾಣದಲ್ಲಿ ಚಿನ್ನವನ್ನು ಧರಿಸಬೇಕು. ಇನ್ನು ಕಲ್ಲಿದ್ದಲು ಮತ್ತು ಕಬ್ಬಿಣದ ವ್ಯಾಪಾರಿಯಾಗಿದ್ದರೆ, ಚಿನ್ನವನ್ನು ಧರಿಸಲೇ ಬಾರದು. ಯಾಕೆಂದರೆ ಈ ವ್ಯಾಪಾರವು ಶನಿಯೊಂದಿಗೆ ನೇರ ಸಂಪರ್ಕ ಹೊಂದಿದೆ.
ಗುರು ಗ್ರಹದೊಂದಿಗೆ ಶನಿಯ ಸಂಬಂಧವು ಉತ್ತಮವಾಗಿಲ್ಲ. ಈ ಕಾರಣದಿಂದಾಗಿ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಮಾತ್ರವಲ್ಲ ಯಾರ ಜಾತಕದಲ್ಲಿ ಗುರುವಿನ ಸ್ಥಾನವು ಕೆಟ್ಟದಾಗಿರುತ್ತದೆಯೋ ಅವರು ಚಿನ್ನವನ್ನು ಧರಿಸಬಾರದು.