ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್ ಉದ್ಯಮಿ: ಇದರ ಬೆಲೆ ಕೇಳಿದರೆ ಖಂಡಿತಾ ದಂಗಾಗ್ತೀರಾ...!

ನವದೆಹಲಿ: ಹೈದರಾಬಾದ್ ಮೂಲದ ಉದ್ಯಮಿ ನಾಸೀರ್ ಖಾನ್ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರನ್ನು ಖರೀದಿಸಿ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೆಕ್ಲಾರೆನ್ 765 ಎಲ್‌ಟಿ ಸ್ಪೆಡರ್ ಹೆಸರಿನ ಕಾರು ಭಾರತದ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಕಾರು ಎಂಬುದು ಅಧಿಕೃತವಾಗಿದೆ. ಈ ಕಾರಿನ ಬೆಲೆ ಬರೋಬ್ಬರಿ 12 ಕೋಟಿ ರೂ. ಇತ್ತೀಚೆಗಷ್ಟೇ ಹೈದರಾಬಾದ್‌ನ ತಾಜ್ ಫಲಕ್ಷುಮಾ ಪ್ಯಾಲೇಸ್‌ನಲ್ಲಿ ಕಾರನ್ನು ಉದ್ಯಮಿ ನಾಸೀರ್ ಖಾನ್ ಗೆ ಡೆಲಿವರಿ ಮಾಡಲಾಗಿದೆ.


ನಾಸೀರ್ ಖಾನ್ ಮೆಕ್ಲಾರೆನ್ 765 ಎಲ್‌ಟಿ ಸ್ಪೆಡರ್ ಕಾರನ್ನು 12 ಕೋಟಿ ರೂ. ನೀಡಿ ಖರೀದಿಸಿದ್ದಾರೆ. ಇದು ಭಾರತದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ ಸೂಪರ್‌ ಕಾರುಗಳಲ್ಲಿ ಒಂದಾಗಿದೆ. ಬಹುಶಃ ಭಾರತದಲ್ಲಿ 765 ಎಲ್‌ಟಿ ಸ್ಪೆಡರ್ ಖರೀದಿ ಮಾಡಿರುವ ಮೊದಲ ಗ್ರಾಹಕ ನಾಸೀರ್ ಖಾನ್ ಆಗಿದ್ದಾರೆ.

ಕಾರು ಆಗಮಿಸಿದ ಖುಷಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ನಾಸೀರ್ ಖಾನ್, ಮೆಕ್ಲಾರೆನ್ 765 ಎಲ್‌ಟಿ ಸ್ಪೆಡರ್‌ಗೆ ನಮ್ಮ ಮನೆಗೆ ಸುಸ್ವಾಗತ. ಯಾವುದೇ ಕನಸು ಸಾಕಷ್ಟು ದೊಡ್ಡದೇನಲ್ಲ, ಹೀಗಾಗಿ ಯಾವಾಗಲೂ ನಿಮ್ಮ ಮಿತಿಗಳನ್ನು ಮುಂದಕ್ಕೆ ತಳ್ಳಿರಿ ಎಂದು ಇನ್‌ಸ್ಟಾಗ್ರಾಂನಲ್ಲಿ ಕಾರಿನ ಫೋಟೋ ಜೊತೆಗೆ ತಮ್ಮ ಸಂತಸವನ್ನು ನಾಸೀರ್ ಹಂಚಿಕೊಂಡಿದ್ದಾರೆ.


ಅಂದಹಾಗೆ ನಾಸೀರ್ ಅವರು ಕಾರುಗಳ ಮೇಲಿನ ಕ್ರೇಜ್ ಜಾಸ್ತಿ ಇದೆ. ಈಗಾಗಲೇ ಅವರ ಬಳಿ ಫೆರಾರಿ 812 ಸೂಪರ್‌ಫಾಸ್ಟ್, ಲ್ಯಾಂಬೋರ್ಗಿನಿ ಅವೆಂಟಡಾರ್, ಮರ್ಸಿಡೀಸ್ ಬೆಂಜ್ ಜಿ350ಡಿ, ರೋಲ್ಸ್ ರಾಯ್ಸ್ ಕುಲ್ಲಿನಾನ್ ಬ್ಲ್ಯಾಕ್ ಬ್ಯಾಡ್ ಫೋರ್ಡ್ ಮುಸ್ತಾಂಗ್ ಮತ್ತು ಲ್ಯಾಂಬೋರ್ಗಿನಿ ಉರುಸ್ ಸೇರಿದಂತೆ ಅನೇಕ ದುಬಾರಿ ಕಾರುಗಳಿಗಳಿವೆ.