ಮಂಗಳೂರು: ವಿಧಾನಸಭಾ ವಿಪಕ್ಷ ಉಪನಾಯಕ ಖಾದರ್ car ಬ್ರೇಕ್ ಫೈಲ್; ಭಾರೀ ಗಂಡಾಂತರದಿಂದ ಪಾರು

ಮಂಗಳೂರು: ವಿಧಾನಸಭಾ ವಿಪಕ್ಷ ಉಪನಾಯಕ, ಮಾಜಿ ಸಚಿವ ಯು.ಟಿ.ಖಾದರ್ ಅವರ ಕಾರು ಇಂದು ಮಧ್ಯಾಹ್ನ ಬ್ರೇಕ್ ಫೈಲ್ ಆಗಿರುವ ಘಟನೆ ನಡೆದಿದೆ. ಆದರೆ ಕೂದಲೆಳೆಯ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ಯು.ಟಿ.ಖಾದರ್ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದರು. ಪಡೀಲ್ ಕಣ್ಣೂರು ಬಳಿ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಕಾರು ಏಕಾಏಕಿ ಬ್ರೇಕ್ ಫೈಲ್ ಆಗಿದೆ. ಬ್ರೇಕ್ ಫೈಲ್ ಆಗಿರುವ ಕಾರನ್ನು ಚಾಲಕ ಲಿಬ್ಜತ್ ಅವರು ನಿಲ್ಲಿಸಲು ಸಫಲರಾಗಿದ್ದಾರೆ. ಪರಿಣಾಮ ಯು.ಟಿ.ಖಾದರ್ ಅವರು ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಬಳಿಕ ಖಾದರ್ ಅವರು ಬೇರೊಂದು ಕಾರಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.