ರಾಹು ಸಂಕ್ರಮಣದ ಪರಿಣಾಮದಿಂದ ಕುಂಭ ರಾಶಿಯವರು ಈ ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತೀರ..!

ರಾಹುವಿನ ಸಂಕ್ರಮಣವು ಕುಂಭ ರಾಶಿಯವರ ಮನೆಯಲ್ಲಿ ಜಗಳಗಳನ್ನು ಹೆಚ್ಚಿಸಬಹುದು. ಈ ರಾಶಿಯವರು ತಮ್ಮ ನೆರೆಹೊರೆಯವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರಬಹುದು ಅಥವಾ ಒಡಹುಟ್ಟಿದವರೊಂದಿಗಿನ ಸಂಬಂಧಗಳು ಪೂರ್ವಜರ ಆಸ್ತಿ ವಿಚಾರವಾಗಿ ಹಾಳಾಗಬಹುದು. 

ಯಾವುದೇ ಹೂಡಿಕೆಯಲ್ಲಿ ಹಣ ಹೂಡುವ ಮುನ್ನ ಕುಂಭ ರಾಶಿಯವರು ಅದರ ಲಾಭ-ನಷ್ಟದ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಹಣದ ಬಗ್ಗೆ ಹೆಚ್ಚು ಜಾಗೃತೆ ವಹಿಸಿ ಮತ್ತು ಸಾಧ್ಯವಾದಷ್ಟು ಸಾಲದ ವಹಿವಾಟುಗಳನ್ನು ತಪ್ಪಿಸಿ.

 ಪ್ರಯಾಣದ ವೇಳೆ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಬಹುದು ಅಥವಾ ಹಾನಿಗೊಳಗಾಗಬಹುದು, ಹೀಗಾಗಿ ಹೆಚ್ಚು ಜಾಗರೂಕರಾಗಿರಿ.

 ನೀವೂ ಅನೇಕ ವಿಷಯಗಳಲ್ಲಿ ಮೋಸ ಹೋಗಬಹುದು. ದಾನ ಕಾರ್ಯಗಳಲ್ಲಿ ನಿಮ್ಮ ಕ್ರಿಯಾಶೀಲತೆ ಕಾಪಾಡಿಕೊಳ್ಳಿ, ಇದನ್ನು ಮಾಡುವುದರಿಂದ ನೀವು ಭರ್ಜರಿ ಲಾಭ ಪಡೆಯುತ್ತೀರಿ.