ಮಂಗಳೂರಿನಲ್ಲಿ ಅಪ್ರಾಪ್ತೆಗೆ ಕಿರುಕುಳ: ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ತಂದೆ!


ಮಂಗಳೂರು: ಅಪ್ರಾಪ್ತೆಗೆ  ಕಿರುಕುಳ ನೀಡುತ್ತಿದ್ದ ಕಾಮುಕನಿಗೆ ಬಾಲಕಿಯ ತಂದೆ ಹಾಗೂ ಸ್ನೇಹಿತರು ಸೇರಿ ಧರ್ಮದೇಟು ನೀಡಿರುವ ಘಟನೆ ಮುಲ್ಕಿಯಲ್ಲಿ‌ ನಡೆದಿದೆ. ಆರೋಪಿಯ ಕಾಲುಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ.

ಹಳೆಯಂಗಡಿ ಇಂದಿರಾನಗರ ನಿವಾಸಿ ದಾವೂದ್ ಹಕೀಂ ಬಂಧಿತ ಆರೋಪಿ.


ಡಿಸೆಂಬರ್ 13 ರಂದು ಆರೋಪಿ ಮುಲ್ಕಿಯ ಕೆರೆಕಾಡು ಗ್ರಾಮದಲ್ಲಿ ಬಾಲಕಿಯನ್ನು ಬೈಕ್ ನಲ್ಲಿ ಹಿಂಬಾಲಿಸಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಚಾರ ತಿಳಿದುಕೊಂಡ ಬಾಲಕಿಯ ತಂದೆ ಹಾಗೂ ಅವರ ಸ್ನೇಹಿತರಿಬ್ಬರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇಂದು ಮತ್ತೆ ಅದೇ ಪ್ರದೇಶದಲ್ಲಿ ಆರೋಪಿ ಬಾಲಕಿಯೊಂದೊಗಸ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಕುಪಿತಗೊಂಡ ಬಾಲಕಿಯ ತಂದೆ ಹಾಗೂ ಸ್ನೇಹಿತರು ಆತನನ್ನು ಕಂಬಕ್ಕೆ  ಕಟ್ಟಿ ಹಾಕಿ ಹೊಡೆದಿದ್ದಾರೆ.

ಬಾಲಕಿಯ ಪೋಷಕರ ದೂರಿನ ಮೇರೆಗೆ ಪೊಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಆರೋಪಿ ದಾವೂದ್ ಹಕೀಂನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ಹಲ್ಲೆ ನಡೆಸಿದವರ ಮೇಲೂ   ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.