ಅಡಿಕೆ ದರ ಪ್ರಪಾತಕ್ಕೆ ಕುಸಿತ: ಕಾರಣವೇನು..? ಮುಂದೇನು..?

ಅಡಿಕೆ ದರ ಪ್ರಪಾತಕ್ಕೆ ಕುಸಿತ: ಕಾರಣವೇನು..? ಮುಂದೇನು..?







ಅಡಿಕೆ ಧಾರಣೆ ಪ್ರಪಾತಕ್ಕೆ ಕುಸಿದಿದೆ. ಕಳೆದ ಎರಡು ತಿಂಗಳ ಅಂತರದಲ್ಲಿ ಅಡಿಕೆ ಧಾರಣೆ 15 ಸಾವಿರ ರೂಪಾಯಿಗಳಷ್ಟು ಕುಸಿತ ಕಂಡಿದೆ.



ಹಳದಿ ಎಲೆ ರೋಗ, ಎಲೆಚುಕ್ಕಿ ರೋಗಬಾಧೆಯಲ್ಲಿ ನಲುಗುತ್ತರುವ ರೈತರು ಇದೀಗ ಬೆಲೆ ಕುಸಿತದ ಕಷ್ಟವನ್ನೂ ಅನುಭವಿಸುವಂತಾಗಿದೆ.



ಸೆಪ್ಟಂಬರ್ ಮೊದಲ ವಾರದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಬೆಳೆಯುವ ರಾಶಿ ಇಡಿ ಪ್ರಕಾರದ ಅಡಿಕೆ ಬೆಲೆ ಕ್ವಿಂಟಾಲ್‌ಗೆ 58000/- ಇತ್ತು. ಅಕ್ಟೋಬರ್‌ನಲ್ಲಿ ಇದರ ಬೆಳೆ ಇಳಿಮುಖಗೊಂಡು 50000/-ಕ್ಕೆ ತಲುಪಿತು. ಡಿಸೆಂಬರ್ ಎರಡನೇ ವಾರದಲ್ಲಿ ಮತ್ತಷ್ಟು ಕುಸಿತ ಕಂಡು ರೂ. 39000/-ಕ್ಕೆ ತಲುಪಿದೆ.



2014-15ರ ಸಂದರ್ಭದಲ್ಲಿ ಅಡಿಕೆ ರಾಶಿ ಇಡಿಯ ಧಾರಣೆ ಒಂದು ಲಕ್ಷ ರೂ.ಗಳಿಗೆ ಮುಟ್ಟಿ ದಾಖಲೆಯನ್ನು ಸ್ಥಾಪಿಸಿತ್ತು. ನಂತರದ ದಿನಗಳಲ್ಲಿ ಈ ಧಾರಣೆ ಕುಸಿತ ಕಂಡಿತ್ತು.

ದಕ್ಷಿಣ ಏಷ್ಯಾ ರಾಷ್ಟ್ರಗಳ ಮಧ್ಯೆ ಇರುವ ಪ್ರಾದೇಶಿಕ ಸಹಕಾರ ಒಪ್ಪಂದ ಲಾಭ ಪಡೆದು ಭೂತಾನ್ ಸೇರಿದಂತೆ ಕೆಲವು ದೇಶಗಳಿಂದ ಅಗ್ಗದ ದರಕ್ಕೆ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಅಡಿಕೆ ಬೆಳೆಗಾರರ ಸಂಘದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.



ಗುಜರಾತ್, ಮಹಾರಾಷ್ಟ, ದೆಹಲಿ ಸೇರಿದಂತೆ ಉತ್ತರ ಭಾರತದ ಗುಟ್ಕಾ , ಪಾನ್ ಮಸಾಲ ಕಂಪೆನಿಗಳೇ ರಾಜ್ಯ ಅಡಿಕೆಗೆ ಪ್ರಮುಖ ಮಾರುಕಟ್ಟೆ. ಅವಶ್ಯಕತೆ ಇರುವಷ್ಟು ದಾಸ್ತಾನು ಸಂಗ್ರಹವಾದ ನಂತರ ಖರೀದಿ ಸ್ಥಗಿತ ಮಾಡಲಾಗುತ್ತದೆ. ಇದು ಧಾರಣೆಯ ಕುಸಿತಕ್ಕೆ ಕಾರಣ ಎಂಬುದು ತಜ್ಞರ ಅಭಿಮತ.





ಇದನ್ನೂ ಓದಿ

PTCL Act- ಎಸ್‌ಸಿ ಎಸ್‌ಟಿ ಜಮೀನು ಪರಭಾರೆ: ಸರ್ಕಾರದಿಂದ ನೂತನ ಸುತ್ತೋಲೆ (28/09/2021)



PTCL Act | DC ಮಟ್ಟದಲ್ಲೇ SC, ST ಜಾಗ ಭೂ ಪರಿವರ್ತನೆ/ಮಾರಾಟ: ಪೂರ್ವಾನುಮತಿ ಬಗ್ಗೆ ಸರ್ಕಾರದ ಮಹತ್ವದ ಸುತ್ತೋಲೆ



SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್‌