-->
400 ರೂ. ದುಡಿಯುವ ದಿನಗೂಲಿ ನೌಕರನಿಗೆ ಐಟಿ ನೋಟಿಸ್: 14 ಕೋಟಿ ರೂ. ಬಾಕಿ ಕಟ್ಟಬೇಕೆಂದ ಆದಾಯ ತೆರಿಗೆ ಅಧಿಕಾರಿಗಳು

400 ರೂ. ದುಡಿಯುವ ದಿನಗೂಲಿ ನೌಕರನಿಗೆ ಐಟಿ ನೋಟಿಸ್: 14 ಕೋಟಿ ರೂ. ಬಾಕಿ ಕಟ್ಟಬೇಕೆಂದ ಆದಾಯ ತೆರಿಗೆ ಅಧಿಕಾರಿಗಳು


ಬಿಹಾರ: ಕೋಟ್ಯಧಿಪತಿ, ಮಿಲಿಯಾಧಿಪತಿಗಳ ಮನೆಗೆ ಐಟಿ ಇಲಾಧಿಕಾರಿಗಳು ದಾಳಿ ಮಾಡುವುದು, ನೋಟಿಸ್ ನೀಡುವುದು ಮಾಮೂಲಿ. ಆದರೆ ಇಲ್ಲೊಂದು ಕಡೆ ದಿನಕ್ಕೆ 400 ರೂ. ದುಡಿಯುವ ದಿನಗೂಲಿ ನೌಕರನ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಲ್ಲದೆ, 14 ಕೋಟಿ ರೂ. ರಿಟರ್ನ್ಸ್ ಬಾಕಿ ಎಂದು ಐಟಿ ನೋಟಿಸ್ ಕೂಡ ನೀಡಿದ್ದಾರೆ. 

ಬಿಹಾರದ ರೋಸ್ಟಸ್ ಜಿಲ್ಲೆಯ ಕರ್ಗರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ, ದಿನಗೂಲಿ ನೌಕರ ಮನೋಜ್ ಯಾದವ್ ಎಂಬವನ ಮನೆಗೆ ಸೋಮವಾರ ಆದಾಯ ತೆರಿಗೆ ಅಧಿಕಾರಿಗಳು ತೆರಳಿದ್ದಾರೆ. ಅಲ್ಲದೆ 14 ಕೋಟಿ ರೂ. ರಿಟರ್ನ್ಸ್ ಬಾಕಿ ಇದೆ ಪಾವತಿಸಿ ಎಂದು ನೋಟಿಸ್ ನೀಡಿದ್ದಾರೆ. ಐಟಿ ಅಧಿಕಾರಿಗಳ ಈ ನಡೆಯಿಂದ ಮನೋಜ್ ಯಾದವ್ ಮಾತ್ರವಲ್ಲದೆ, ಆತನ ಕುಟುಂಬಸ್ಥರು, ಊರವರು ಕೂಡ ಅಚ್ಚರಿಗೊಂಡಿದ್ದಾರೆ. 

ತನ್ನಲ್ಲಿರುವ ಎಲ್ಲಾ ಆಸ್ತಿಯನ್ನು ಮಾರಿದರೂ 14 ಕೋಟಿ ರೂ. ಬಾಳುವುದಿಲ್ಲ ಎಂದು ಮನೋಜ್ ಯಾದವ್ ಹೇಳಿದ್ದರೂ ಐಟಿ ಅಧಿಕಾರಿಗಳು ನಂಬಿಲ್ಲ ಎನ್ನಲಾಗಿದೆ. ಬ್ಯಾಂಕ್ ದಾಖಲೆಗಳ ಪ್ರಕಾರ ಮನೋಜ್ ಹೆಸರಲ್ಲಿ ಕಂಪೆನಿಗಳು ನಡೆಯುತ್ತಿದ್ದು ಅದರ ಬಾಬು 14 ಕೋಟಿ ರೂ. ತೆರಿಗೆ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದು ಮನೋಜ್ ದಿಗಿಲಾಗುವಂತೆ ಮಾಡಿದೆ.

ಮನೋಜ್ ಈ ಮೊದಲು ದೆಹಲಿ, ಹರಿಯಾಣ ಹಾಗೂ ಪಂಜಾಬ್ ಗಳಲ್ಲಿ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದನು. ಕೊರೊನಾ ಲಾಕ್ ಡೌನ್ ಸಂದರ್ಭ 2020ರಲ್ಲಿ ಬಿಹಾರಕ್ಕೆ ಮರಳಿ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ತಾನು ಈ ಹಿಂದೆ ನೌಕರಿ ಮಾಡುತ್ತಿದ್ದ ಕಂಪೆನಿಗಳು ನನ್ನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸಿರಬಹುದು. ನಾನು ಕೆಲಸಕ್ಕೆ ಸೇರುವ ಸಂದರ್ಭ ಅವರು ನನ್ನ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ಪಡೆದಿದ್ದರು ಎಂಬುದಾಗಿ ಮನೋಜ್ ಹೇಳಿದ್ದಾನೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article