25 ವರ್ಷಗಳ ಕಾಲ ಒಂಟಿ ಜೀವನ ನಡೆಸಿದ ಹೆತ್ತತಾಯಿಗೆ 2ನೇ ಮದುವೆ ಮಾಡಿಸಿದ ಪುತ್ರಿ


ನವದೆಹಲಿ: ರಿಯಾ ಚರ್ಕವರ್ತಿ ಎಂಬ ಪುತ್ರಿ ತನ್ನ ತಾಯಿಗೆ ವಿವಾಹ ಮಾಡಿರುವ ಘಟನೆಯೊಂದು ನಡೆದಿದೆ. ತಾಯಿ ಇದೀಗ ಎರಡನೇ ವಿವಾಹವಾಗಿ ನೆಮ್ಮದಿಯ ಜೀವನ ನಡೆಸುವಲ್ಲಿ ಪುತ್ರಿ ನೆರವಾಗಿದ್ದಾಳೆ. ಈ ಬಗ್ಗೆ ಪುತ್ರಿ ರಿಯಾ ಚಕ್ರವರ್ತಿ ಸಂತಸ ಹಂಚಿಕೊಂಡಿದ್ದಾಳೆ.

ರಿಯಾ ಚರ್ಕವರ್ತಿ ತಂದೆ ಬಹಳ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಪರಿಣಾಮ ಆಕೆಯ ತಾಯಿ ಒಬ್ಬಂಟಿ ಜೀವನ ಸಾಗಿಸುತ್ತಿದ್ದರು. ಎರಡನೇ ವಿವಾಹದ ಬಗ್ಗೆ ಯೋಚಿಸಿರಲಿಲ್ಲ. ಅದೊಂದು ದಿನ ಚಿಕ್ಕಮ್ಮನಿಂದ ಕರೆಯೊಂದು ಬರುತ್ತದೆ. ಅವರು ಮಾತನಾಡುತ್ತಾ 'ನಿನ್ನ ತಾಯಿಯನ್ನು ಒಬ್ಬರು ಇಷ್ಟಪಡುತ್ತಿದ್ದಾರೆ. ವಿವಾಹವಾಗುವ ಬಗ್ಗೆಯೂ ಕೇಳಿಕೊಂಡಿದ್ದಾರೆ. ಅವರ ಜತೆಗೆ ವಿವಾಹ ಮಾಡಿಕೊಟ್ಟರೆ ಇಬ್ಬರೂ ನೆಮ್ಮದಿಯಿಂದ ಇರುತ್ತಾರೆ. ಈ ಬಗ್ಗೆ ಯೋಚಿಸು' ಎಂದು ಹೇಳಿದ್ದರು.

ರಿಯಾ ಚರ್ಕವರ್ತಿ ಈ ಬಗ್ಗೆ ಮಾತನಾಡಿ 'ನನ್ನ ತಂದೆ ಮೃತಪಟ್ಟ ವೇಳೆ ನನಗೆ ಕೇವಲ 2 ವರ್ಷ. ತಾಯಿಗೆ 25 ವರ್ಷ. ಆಗ ಎಲ್ಲರೂ ತಾಯಿಯಲ್ಲಿ ಎರಡನೇ ಮದುವೆ ಆಗಿ ಎಂದು ಹೇಳುತ್ತಿದ್ದರು. ಆದರೆ ನನ್ನಮ್ಮ ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದಿದ್ದಾರೆ.

ಚಿಕ್ಕಮ್ಮ ಫೋನಿನಲ್ಲಿ ಆಡಿದ ಮಾತುಗಳನ್ನು ರಿಯಾ ಚರ್ಕವರ್ತಿ ಗಂಭೀರವಾಗಿ ಪರಿಗಣಿಸಿದ್ದರು. ಆ ಬಳಿಕ ತನ್ನ ತಾಯಿಯನ್ನು ಪ್ರೀತಿಸುತ್ತಿರುವವರೊಂದಿಗೆ ವಿವಾಹ ಮಾಡಲು ರಿಯಾ ಮುಂದಾಗಿದ್ದಾರೆ. ಇದೀಗ ತನ್ನ ತಾಯಿಯ ವಿವಾಹವನ್ನು ನೆರವೇರಿಸಿರುವ ಸಂಭ್ರಮದಲ್ಲಿರುವ ರಿಯಾ ಚರ್ಕವರ್ತಿ, ನನ್ನಮ್ಮ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ಆಕೆ ಸಂತೋಷದಿಂದ ಇರುತ್ತಾಳೆ. ಇದು ನನ್ನ ಸಂತೋಷಕ್ಕೂ ಕಾರಣವಾಗಿದೆ ಎಂದು ಹೇಳಿದ್ದಾಳೆ.