-->
ನಾಲ್ಕು ತಿಂಗಳಿನಲ್ಲಿ ಸ್ನಾನವನ್ನೇ ಮಾಡದ 18 ವರ್ಷದ ಯುವತಿಯನ್ನು ಫ್ಲ್ಯಾಟ್ ನಿಂದಲೇ ಹೊರ ಹಾಕಿದ ರೂಂಮೇಟ್

ನಾಲ್ಕು ತಿಂಗಳಿನಲ್ಲಿ ಸ್ನಾನವನ್ನೇ ಮಾಡದ 18 ವರ್ಷದ ಯುವತಿಯನ್ನು ಫ್ಲ್ಯಾಟ್ ನಿಂದಲೇ ಹೊರ ಹಾಕಿದ ರೂಂಮೇಟ್


ನವದೆಹಲಿ: ನಾಲ್ಕು ತಿಂಗಳಲ್ಲಿ ಒಂದೇ ಒಂದು ಬಾರಿ ಸ್ನಾನವನ್ನೇ ಮಾಡದ 18 ವರ್ಷದ ಯುವತಿಯನ್ನು ರೂಮ್‌ ಮೇಟ್ ಫ್ಲ್ಯಾಟ್‌ನಿಂದಲೇ ಹೊರ ಹಾಕಿರುವ ಪ್ರಕರಣವೊಂದು ವರದಿಯಾಗಿದೆ. 

ತಮ್ಮ ಸ್ನೇಹಿತೆ ಸ್ವಚ್ಚತೆಗೆ ಮಹತ್ವ ನೀಡುತ್ತಿಲ್ಲ ಎಂದು 23 ವರ್ಷದ ರೂಮ್‌ಮೇಟ್ ಆಕೆಯನ್ನು ಫ್ಲ್ಯಾಟ್‌ನಿಂದ ಹೊರಹಾಕಿದ್ದಾಗಿ ಹೇಳಿಕೊಂಡಿದ್ದಾಳೆ. ನಾವೀರ್ವರೂ ಕಳೆದ ನಾಲ್ಕು ತಿಂಗಳಿನಿಂದ ಜೊತೆಗಿದ್ದೇವೆ. ಆದರೆ ಸ್ನಾನವನ್ನೇ ಮಾಡದ ಆಕೆಯೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಆಕೆ ಬೆಳಗ್ಗೆ ರನ್ನಿಂಗ್ ಹೋಗುತ್ತಾಳೆ. ಆ ಬಳಿಕ ಮೈಯಿಡೀ ಬೆವರಿದ್ದರೂ ಆಕೆ ಸ್ನಾನ ಮಾಡುತ್ತಿಲ್ಲ. ಆ ವಾಸನೆ ನನಗೆ ಹೊಟ್ಟೆ ತೊಳೆಸಿದಂತಾಗುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ. 

ಸ್ನಾನ ಮಾಡುವಂತೆ ಅವಳ ಬಳಿ ಅನೇಕ ಸಲ ಹೇಳಿಕೊಂಡಿದ್ದರೂ ಮಾಡುತ್ತೇನೆ ಎಂದು ಹೇಳಿತ್ತಾಳೆ ವಿನಃ ಮತ್ತೆ ಮಾಡುತ್ತಿರಲಿಲ್ಲ. ಮೈ ವಾಸನೆ ಬರುತ್ತಿದ್ದರೂ ಆಕೆ ಸ್ನಾನ ಮಾಡುತ್ತಿರಲಿಲ್ಲ. ಒಂದೇ ಸ್ನಾನ ಮಾಡು ಇಲ್ಲವೇ ಫ್ಲ್ಯಾಟ್‌ನಿಂದ ಹೊರಹಾಕುವುದಾಗಿ ಹೇಳಿದೆ. ಕೊನೆಗೂ ಸ್ನಾನ ಮಾಡದ ಆಕೆಯನ್ನು ಫ್ಲ್ಯಾಟ್ ಮಾಲೀಕರಿಗೆ ತಿಳಿಸಿ ಅವಳನ್ನು ಹೊರಹಾಕಲಾಗಿದೆ ಎಂದು ಯುವತಿ ರೆಡಿಟ್‌ನಲ್ಲಿ ಹೇಳಿಕೊಂಡಿದ್ದು ವೈರಲ್ ಆಗಿದೆ. ಆದರೆ ಇದು ಎಲ್ಲಿ ನಡೆದಿದ್ದು ಎಂಬಿತ್ಯಾದಿ ಮಾಹಿತಿ ಬಹಿರಂಗಪಡಿಸಿಲ್ಲ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article