-->

ವಿದ್ಯಾರ್ಥಿನಿಯನ್ನೇ ವಿವಾಹವಾಗಲು ಲಿಂಗ ಪರಿವರ್ತನೆ ಮಾಡಿಕೊಂಡ ದೈಹಿಕ ಶಿಕ್ಷಕಿ

ವಿದ್ಯಾರ್ಥಿನಿಯನ್ನೇ ವಿವಾಹವಾಗಲು ಲಿಂಗ ಪರಿವರ್ತನೆ ಮಾಡಿಕೊಂಡ ದೈಹಿಕ ಶಿಕ್ಷಕಿ

ಜೈಪುರ : ರಾಜಸ್ಥಾನದ ಭರತ್‌ಪುರದ ದೈಹಿಕ ತರಬೇತಿ ಶಿಕ್ಷಕಿಯೋರ್ವರು ತಮ್ಮ ವಿದ್ಯಾರ್ಥಿನಿಯನ್ನೇ ವಿವಾಹವಾಗಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗಂಡಾಗಿ ಪರಿವರ್ತನೆಗೊಂಡಿದ್ದಾರೆ.

ಮೀರಾ ಕುಂತಲ್ ಎಂಬ 29 ವರ್ಷದ ದೈಹಿಕ ಶಿಕ್ಷಕಿ ತಮ್ಮ ತರಗತಿಯೊಂದರಲ್ಲಿ ಭೇಟಿಯಾದ ಕಲ್ಪನಾರೊಂದಿಗೆ ವಿವಾಹವಾಗುವ ಸಲುವಾಗಿ ಲಿಂಗ ಪರಿವರ್ತನೆ ಮಾಡಿಕೊಂಡವರು. ಈಗ ಅವರು ಆರವ್ ಕುಂತಲ್ ಎಂದು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಐದು ವರ್ಷಗಳಿಂದ ತಮ್ಮ ವಿದ್ಯಾರ್ಥಿನಿಯೊಂದಿಗೆ ಸಂಬಂಧ ಹೊಂದಿದ್ದ ಅವರು ಕೊನೆಗೂ ಕುಟುಂಬದವರ ಒಪ್ಪಿಗೆ ಮೇರೆಗೆ ರವಿವಾರ ಆಕೆಯನ್ನು ವಿವಾಹವಾಗಿದ್ದಾರೆ. 

"ನನ್ನ ದೇಹವನ್ನು ಒಪ್ಪಿಕೊಳ್ಳುವುದು ನನಗೆ ಕಷ್ಟಕರವಾಗಿತ್ತು. ಆ ಕಾರಣದಿಂದ ನಾನು ನನ್ನ ಲಿಂಗವನ್ನು ಬದಲಾಯಿಸಲು ಬಯಸಿದ್ದೇನೆ. ನಾನು 2010ರಲ್ಲಿ ಲಿಂಗ ಬದಲಾವಣೆಯ ಕುರಿತು ಲೇಖನವನ್ನು ಓದಿದ್ದೆ. ಅಂದಿನಿಂದ, ನಾನು ನನ್ನ ಲಿಂಗ ಬದಲಾಯಿಸುವ ಮಾರ್ಗಗಳನ್ನು ಹುಡುಕಲಾರಂಭಿಸಿದೆ. ಅಲ್ಲದೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನನ್ನ ಮನಸ್ಸನ್ನು ಸಿದ್ಧಪಡಿಸಿದೆ" ಎಂದು ಆರವ್ ಹೇಳಿದ್ದಾರೆ. 


ಯೂಟ್ಯೂಬ್ ಮೂಲಕ ಆರವ್ ತನಗೆ ಶಸ್ತ್ರಚಿಕಿತ್ಸೆ ಮಾಡಿರುವ ದಿಲ್ಲಿ ಮೂಲದ ವೈದ್ಯರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. "ಆ ಬಳಿಕ‌ ನಾನು ವೈದ್ಯರನ್ನು ಸಂಪರ್ಕಿಸಿದೆ, ಬಳಿಕ ಚಿಕಿತ್ಸೆ ಪ್ರಾರಂಭವಾಯಿತು. ಮೊದಲ ತಪಾಸಣೆಯನ್ನು ಡಿಸೆಂಬರ್ 25 , 2019ರಂದು ಮಾಡಲಾಯಿತು. ಅಂತಿಮ ಶಸ್ತ್ರಚಿಕಿತ್ಸೆಯನ್ನು 2021ರ ಡಿಸೆಂಬರ್ ನಲ್ಲಿ ನಡೆಸಲಾಯಿತು'' ಎಂದು ಅವರು ಹೇಳಿದ್ದಾರೆ.

ತನ್ನ ಹಾಗೂ ಶಿಕ್ಷಕಿಯ ಸಂಬಂಧದ ಕುರಿತು ಕಲ್ಪನಾ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಮೊದಲು ಅವರು ಇದನ್ನು ಒಪ್ಪದಿದ್ದರೂ ಬಳಿಕ ಆಕೆಯ ಕುಟುಂಬವು ಈ ಪ್ರಸ್ತಾಪವನ್ನು ಒಪ್ಪಿಕೊಂಡಿದೆ. ಕಬಡ್ಡಿ ಆಟಗಾರ್ತಿಯಾಗಿರುವ ಕಲ್ಪನಾ, ಕ್ರೀಡೆಯಲ್ಲಿ ತಾನು ಮಾಡಿದ ಎಲ್ಲಾ ಸಾಧನೆಗಳು ಆರವ್‌ಗೆ ಸಲ್ಲುತ್ತದೆ ಎಂದಿದ್ದಾರೆ. ಅವರ ಬೆಂಬಲವೇ ತನಗೆ ಮೂರು ರಾಜ್ಯ ಮಟ್ಟದ ಮತ್ತು ಒಂದು ರಾಷ್ಟ್ರ ಮಟ್ಟದ ಆಟವನ್ನು ಆಡಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ. ಆರವ್ ಚಿಕ್ಕಂದಿನಿಂದಲೂ ಹುಡುಗನಂತೆ ಬದುಕುತ್ತಿದ್ದ ಎಂದು ಆರವ್ ತಂದೆ ಬಿರಿ ಸಿಂಗ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article