-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ವಾಟ್ಸ್ಆ್ಯಪ್‌ ಮೆಸೇಜ್‌ ಬಂದರೆ ಈ ಮನೆಯಲ್ಲಿನ ಸ್ವಿಚ್ ಗಳು‌ ಆನ್ , ಆಫ್...!: ಮೂರು ತಿಂಗಳಿನಿಂದ ಇಡೀ ಕುಟುಂಬವೇ ಬೆಚ್ಚಿ ಬಿದ್ದ ಘಟನೆಯ ರಹಸ್ಯ ಬಯಲು

ವಾಟ್ಸ್ಆ್ಯಪ್‌ ಮೆಸೇಜ್‌ ಬಂದರೆ ಈ ಮನೆಯಲ್ಲಿನ ಸ್ವಿಚ್ ಗಳು‌ ಆನ್ , ಆಫ್...!: ಮೂರು ತಿಂಗಳಿನಿಂದ ಇಡೀ ಕುಟುಂಬವೇ ಬೆಚ್ಚಿ ಬಿದ್ದ ಘಟನೆಯ ರಹಸ್ಯ ಬಯಲು

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಕಳೆದ ಮೂರು ತಿಂಗಳಿನಿಂದ ವಾಟ್ಸ್ಆ್ಯಪ್‌ನಲ್ಲಿ ಬಂದಿರುವ ಮೆಸೇಜ್‌ನಂತೆಯೇ ಮನೆಯೊಂದರಲ್ಲಿ ನಡೆಯುತ್ತಿದ್ದ ವಿಚಿತ್ರ ಪ್ರಕರಣವೊಂದರ ಅಸಲಿ ಸತ್ಯ ಇದೀಗ ಬಯಲಾಗಿದೆ.‌ ಪರಿಣಾಮ ಇಡೀ ಕುಟುಂಬ ಗಾಬರಿಗೊಂಡು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಇದೀಗ ಆ ವಿಚಿತ್ರ ಘಟನೆಯ ಹಿಂದೆ ಯುವಕನೊಬ್ಬನ ಕೈವಾಡವಿರುವುದು ಬಹಿರಂಗವಾಗಿದೆ.

ಕೊಲ್ಲಂನ ಕೊಟ್ಟರಾಕ್ಕರ ಪಟ್ಟಣದ ಸಮೀಪ ಇರುವ ನೆಲ್ಲಿಕುನ್ನಮ್‌ನ ನಿವಾಸಿ ಹಾಗೂ ಇಲೆಕ್ಟ್ರಿಷನ್ ರಾಜನ್ ಎಂಬವರ ಮನೆ ಈ ಪ್ರಕರಣಕ್ಕೆ ಸಾಕ್ಷಿಯಾಗಿತ್ತು. ವಾಟ್ಸ್‌ಆ್ಯಪ್‌ನಲ್ಲಿ ಬಂದಿರುವ ಮಸೇಜ್‌ನಂತೆಯೇ ಈ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿತ್ತು. 

ಕಳೆದ ಏಳು ತಿಂಗಳಿಂದ ರಾಜನ್ ಪುತ್ರಿ ಸಾಜಿತಾ, ತನ್ನ ತಾಯಿ ವಿಲಾಸಿನಿ ಮೊಬೈಲ್‌ನ ಮಸೇಜ್‌ಗಳನ್ನು ಆಕೆಯ ಗಮನಕ್ಕೆ ಬಾರದಂತೆ ಸ್ವೀಕರಿಸುತ್ತಿದ್ದಳು. ಅಚ್ಚರಿಯೆಂದರೆ ಈ ಮಸೇಜ್ ಬಂದ ತಕ್ಷಣ ಅವರ ಮನೆಯ ವಿದ್ಯುತ್ ಸಾಧನಗಳು ಹಾಗೂ ಸ್ವಿಚ್ ಬೋರ್ಡ್ ಗಳು ಇದ್ದಕ್ಕಿದ್ದಂತೆ ಆನ್ ಅಥವಾ ಆಫ್ ಆಗುತ್ತಿತ್ತು. ರಾಜನ್ ಇಲೆಕ್ಟ್ರಿಷನ್ ಆಗಿದ್ದರೂ ತಮ್ಮ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ.

ಫ್ಯಾನ್ ಸ್ವಿಚ್ ಆಫ್ ಆಗುತ್ತದೆ ಎಂದು ಮಸೇಜ್ ಬಂದ ತಕ್ಷಣ ಫ್ಯಾನ್ ಆಫ್ ಆಗುತ್ತಿತ್ತು. ಆನ್ ಆಗುತ್ತದೆ ಎಂದು ಮೆಸೇಜ್ ಬಂದರೆ ಆನ್ ಆಗುತ್ತಿತ್ತು. ಟಿವಿ ಕೂಡ ಆನ್ ಆ್ಯಂಡ್ ಆಫ್ ಆಗುತ್ತಿತ್ತು. ಟ್ಯಾಂಕರ್‌ನಿಂದ ನೀರು ಹೊರ ಸುರಿಯುತ್ತದೆ ಎಂದು ಕೂಡಲೇ ಅದೇ ರೀತಿ ಘಟನೆ ನಡೆಯುತ್ತಿತ್ತು. ಈ ಸಂಬಂಧ ಸೈಬರ್ ಸೆಲ್‌ಗೆ ಕುಟುಂಬ ದೂರು ನೀಡಿತ್ತು.

ತನಿಖೆ ನಡೆಸಿದ ಪೊಲೀಸರಿಗೆ ಯುವಕನೊಬ್ಬನ ಕೈವಾಡ ಇರುವುದು ಬಯಲಾಗಿದೆ. ಆ್ಯಪ್ ಮೂಲಕ ಸಂತ್ರಸ್ತ ಕುಟುಂಬದ ಮೊಬೈಲ್ ಸಂಪರ್ಕಿಸಿ, ಈ ಕೃತ್ಯ ಎಸಗುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಯುವಕನ ಮೊಬೈಲ್ ಫೋನ್‌ನಲ್ಲಿ ವಿಶೇಷ ಆ್ಯಪ್ ಒಂದು ಇನ್‌ಸ್ಟಾಲ್ ಆಗಿದ್ದು, ಅದರ ಮೂಲಕವೇ ಸಂತ್ರಸ್ತ ಕುಟುಂಬದ ವಿದ್ಯುತ್ ಸಾಧನಗಳನ್ನು ಹ್ಯಾಕ್ ಮಾಡಿ ನಿಯಂತ್ರಣ ಮಾಡುತ್ತಿದ್ದ.

ಇದನ್ನು ತಮಾಷೆಗಾಗಿ ಮಾಡಿರುವ ಆತ, ಇಷ್ಟೊಂದು ಗಂಭೀರವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಪೊಲೀಸರ ಮುಂದೆ ಬಾಯ್ದಿಟ್ಟಿದ್ದಾನೆ. ಟಿವಿ ಸೇರಿದಂತೆ ಇತರೆ ಗೃಹ ಬಳಕೆಯ ವಿದ್ಯುತ್ ಸಾಧನಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೊಟ್ಟಾರಕ್ಕರ ಎಸ್‌ಐ ಪ್ರಶಾಂತ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ