-->
1000938341
ಉಪ್ಪಿನಂಗಡಿ: ಪತಿಯ ಮುಂಭಾಗವೇ ಮಹಿಳೆಯ ಅತ್ಯಾಚಾರಕ್ಕೆ ಯತ್ನ; ದೂರು

ಉಪ್ಪಿನಂಗಡಿ: ಪತಿಯ ಮುಂಭಾಗವೇ ಮಹಿಳೆಯ ಅತ್ಯಾಚಾರಕ್ಕೆ ಯತ್ನ; ದೂರು

ಉಪ್ಪಿನಂಗಡಿ: ಪತಿಯ ಮುಂಭಾಗದಲ್ಲಿಯೇ ಕಾಮುಕನೋರ್ವನು ಮಾನಭಂಗಕ್ಕೆ ಮುಂದಾಗಿದ್ದು, ಈ ವೇಳೆ ತಡೆಯೊಡ್ಡಿದ್ದ ಪತಿಯನ್ನು ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಮುಡಿಜಾಲುವಿನ ಮಹಿಳೆ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಹದ್‌ ಎನ್ನುವಾತ ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ ತನ್ನ ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ವೇಳೆ ತನ್ನ ಪತಿ ಅಬೂಬಕ್ಕರ್‌ ತಡೆಯೊಡ್ಡಿದ್ದಾರೆ. ಈ ಸಂದರ್ಭ ಮನೆಯಿಂದ ಹೊರಹೋದ ಸಾದತ್ ದೊಣ್ಣೆ ತಂದು ಅಬೂಬಕ್ಕರ್‌ ಗೆ ಜೀವಬೆದರಿಕೆಯೊಡ್ಡಿ ತಲೆ, ಮುಖ, ಸೊಂಟಕ್ಕೆ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article