-->
ಶೌಚಗೃಹದಲ್ಲೇ ಶಿಶುವಿಗೆ ಜನ್ಮನೀಡಿದ ಅಪ್ರಾಪ್ತೆ: ಕಸಿನ್ ವಿರುದ್ಧವೇ ಪೊಕ್ಸೊ ಪ್ರಕರಣ ದಾಖಲು

ಶೌಚಗೃಹದಲ್ಲೇ ಶಿಶುವಿಗೆ ಜನ್ಮನೀಡಿದ ಅಪ್ರಾಪ್ತೆ: ಕಸಿನ್ ವಿರುದ್ಧವೇ ಪೊಕ್ಸೊ ಪ್ರಕರಣ ದಾಖಲು

ರಾಜಸ್ತಾನ: ಶಾಲೆಯೊಂದರ ಶೌಚಗೃಹದಲ್ಲೇ ಅಪ್ರಾಪ್ತೆಯೊಬ್ಬಳು ಶಿಶುವಿಗೆ ಜನ್ಮ ನೀಡಿ, ಅಲ್ಲೇ ಪಕ್ಕದಲ್ಲಿ ಇಟ್ಟುಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 11 ತಿಂಗಳಿಂದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕಸಿನ್ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದೆ.

ರಾಜಸ್ತಾನದ ಹಳ್ಳಿಯೊಂದರಲ್ಲಿ ದೊರಕಿದ ನವಜಾತ ಶಿಶು ಹಾಗೂ ಮಗುವಿಗೆ ಜನ್ಮನೀಡಿದ್ದ ಅಪ್ರಾಪ್ತ ವಯಸ್ಕಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಂಬಂಧಿ, 21 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯದಲ್ಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ನವಜಾತ ಶಿಶು ಪತ್ತೆಯಾಗಿರುವ ನಾಲ್ಕು ಗಂಟೆಗಳಲ್ಲೇ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ನವಜಾತ ಶಿಶುವಿಗೆ ಜನ್ಮನೀಡಿದ 15 ವರ್ಷದ ಬಾಲಕಿಯ ಹೇಳಿಕೆ ಮೇರೆಗೆ ಪೊಲೀಸರು ಆತನ ವಿರುದ್ಧ ಅತ್ಯಾಚಾರ ಹಾಗೂ ಪೋಕ್ಸೊ ಕೇಸ್ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಕಸಿನ್ಸ್ ಆಗಿದ್ದು, ಆತ ಆಕೆಯನ್ನು ಕಳೆದ ಸುಮಾರು ಹತ್ತು ತಿಂಗಳಿನಿಂದ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

ಅಜ್ಜಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅದೇ ಹಳ್ಳಿಯಲ್ಲಿದ್ದ ಕಸಿನ್ ಭೇಟಿ ಆಗುತ್ತಿದ್ದ. ಅಜ್ಜಿ ಮನೆಯಲ್ಲಿಯೇ ತಂಗುತ್ತಿದ್ದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಹೀಗೆ ಒಂದೆರಡು ದಿನ ಅಜ್ಜಿ ಮನೆಯಲ್ಲಿ ತಂಗುತ್ತಿದ್ದಾಗೆಲ್ಲ ಬರುತ್ತಿದ್ದ ಈತ ಈ ಕೃತ್ಯವನ್ನು ಎಸಗುತ್ತಿದ್ದ ಎಂಬುದು ಬಯಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article