-->
 ಅಂಬೇಡ್ಕರ್ ಚಿಂತನೆ ಪಾಲಿಸಿದರೆ ಬದುಕು ಹಸನು: ಡಾ.ಶ್ರೀನಿವಾಸ್ ಹೊಡೆಯಾಲ

ಅಂಬೇಡ್ಕರ್ ಚಿಂತನೆ ಪಾಲಿಸಿದರೆ ಬದುಕು ಹಸನು: ಡಾ.ಶ್ರೀನಿವಾಸ್ ಹೊಡೆಯಾಲ

 
ಮೂಡುಬಿದಿರೆ: ಪ್ರಪಂಚದ ಬಹುತೇಕ ದೇಶಗಳ ಸಂವಿಧಾದಲ್ಲಿ ಮೂಲಭೂತ ಹಕ್ಕು ಇದೆ. ಆದರೆ ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳೊಂದಿಗೆ ಸಮಾನವಾಗಿ ಬದುಕುವ ಹಕ್ಕಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಹೊಡೆಯಾಲ ಹೇಳಿದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ,  ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ "ಅಂಬೇಡ್ಕರ್ ಓದು" ಉಪನ್ಯಾಸ ಕರ‍್ಯಕ್ರಮ ಕಾಮರ್ಸ್ ಹಾಲ್ ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಸಂವಿಧಾನ ಬರುವ ಮೊದಲು ಮತದಾನ ಮಾಡುವ ಹಕ್ಕು ಎಲ್ಲರಿಗೂ ಇರಲಿಲ್ಲ. ಹಿಂದಿನ ದಿನಗಳಲ್ಲಿ ಪ್ರಬಲ ವರ್ಗದವರು ಮಾತ್ರ ಅಧಿಕಾರವನ್ನು ಅನುಭವಿಸುತ್ತಿದ್ದರು. ಆದರೆ ಇಂದು  ಮತದಾನದಿಂದಾಗಿ ಸಾಮಾನ್ಯ ವ್ಯಕ್ತಿಗೂ ಅಧಿಕಾರ ಚಲಾಹಿಸುವ ಅವಕಾಶ ಸಿಕ್ಕಿದೆ. ಪ್ರಸ್ತುತ ಸಂವಿಧಾನ ಹೊರತಾಗಿ ದೇಶದ ಯಾವುದೇ ಅಭಿವೃದ್ಧಿ ಕೆಲಸವನ್ನು ಯೋಚಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಅಂಬೇಡ್ಕರ್‌ರವರ ಚಿಂತನೆ ಪಾಲಿಸಿದರೆ ಬದುಕು ಹಸನಾಗುತ್ತದೆ ಎಂದರು.

ಭಾರತದ ಸಂವಿಧಾನವು ತನ್ನ ನಾಗರಿಕರಿಗೆ ಮಾರ್ಗದರ್ಶಕ ಬೆಳಕಿನಂತೆ ಕಾರ್ಯನಿರ್ವಹಿಸುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ನಿಜಕ್ಕೂ ಶ್ಲಾಘನೀಯ ಕೆಲಸ ಮಾಡಿದ್ದು, ಅವರು ಸದಾ ಸ್ಮರಣೀಯರು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್ ಕೈರೋಡಿ ವಹಿಸಿದ್ದರು.  ಸಂವಿಧಾನದ ಪವಿತ್ರವಾದದ್ದು, ನಮ್ಮ ದೇಶದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳು ಸಂವಿಧಾನದ ಆಶಯದಲ್ಲಿ ನಡೆಯುತ್ತವೆ.  ಹಾಗಾಗಿ ವಿದ್ಯಾರ್ಥಿಗಳು ಸಂವಿಧಾನವನ್ನು ಓದುವುದರ ಜತೆಗೆ ಅದರ ಶ್ರೇಷ್ಠತೆಯನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂವಿಧಾನ ದಿನದ ಅಂಗವಾಗಿ ನಡೆದ "ಅಂಬೇಡ್ಕರ್ ಓದು" ಸ್ಪರ್ಧಯ ವಿಜೇತರಿಗೆ ಬಹುಮಾನದ ಜೊತೆಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಸಂಯೋಜಕಿ ಡಾ. ಜ್ಯೋತಿ ರೈ, ಉಪನ್ಯಾಸಕರು ಉಪಸ್ಥಿತರಿದ್ದರು.

ಆಶಯ ಗೀತೆ ದರ್ಶನ್ ತಂಡ ಹಾಡಿದರು. ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿನಿ ಮನಿಷಾ ಸ್ವಾಗತಿಸಿ, ಅನುಷಾ.ಎಸ್ ವಂದಿಸಿ, ಸ್ಮಿತಾ ಭಟ್ ನಿರೂಪಿಸಿದರು.


Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article